ಪುತ್ತೂರು: ಬಹು ದಿನಗಳ ಬೇಡಿಕೆಯಾದ ಹಾರಾಡಿ-ರೈಲ್ವೇ ನಿಲ್ದಾಣ ರಸ್ತೆ ಇದೀಗ ಅಭಿವೃದ್ಧಿ ಕಂಡಿದೆ. ಆದರೆ ಮುಖ್ಯರಸ್ತೆಯಿಂದ ರೈಲ್ವೇ ರಸ್ತೆಯನ್ನು ಸಂಪರ್ಕಿಸುವ ಬಳಿಯೇ ಅಪಾಯವೊಂದು ಕಾದಿದೆ.
ಪುತ್ತೂರಿನ ಬೊಳುವಾರು ಸಮೀಪ ಹಾರಾಡಿ ರೈಲ್ವೇ ಸೆತುವೆ ಬಳಿ ಕೋಟಿ ರೂಪಾಯಿ ಅನುದಾನದಲ್ಲಿ ರಚಿಸಿದ ರೈಲು ನಿಲ್ದಾಣ ಸಂಪರ್ಕ ರಸ್ತೆ ಪ್ರವೇಶಿಸುವಲ್ಲಿ ಚರಂಡಿಯೊಂದು ಬಾಯ್ದೆರೆದು ನಿಂತಿದ್ದು, ಅಪಾಯದ ಸ್ಥಿತಿಯಲ್ಲಿದೆ.
ಇದು ಲೋಕೋಪಯೋಗಿ ಇಲಾಖೆಯ ರಸ್ತೆಗೆ ಸಂಬಂದಿಸಿದ್ದೆಂದು ನಗರಸಭೆ ತಿಳಿಸಿದ್ದು, ತಕ್ಷಣ ಲೋಕೋಪಯೋಗಿ ಇಲಾಖೆ ಸರಿಪಡಿಸುವ ಮೂಲಕ ಸಂಭಾವ್ಯ ಅಪಘಾತ ವಾಗದಂತೆ ಸೂಕ್ತ ಕ್ರಮ ವಹಿಸಿಬೇಕಾಗಿದೆ.