ಅಕ್ಷಯ ಕಾಲೇಜಿನಲ್ಲಿ ಫ್ಯಾಷನ್ ಡಿಸೈನ್ ಸಂಘ ಉದ್ಘಾಟನೆ

ಪುತ್ತೂರು: ಅಕ್ಷಯ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು ಐಕ್ಯುಎಸಿ ಸಹಯೋಗದೊಂದಿಗೆ FACERA ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭ ನಡೆಯಿತು.

ಮಂಗಳೂರು ಪಾಥ್ ವೇ ಎಂಟರ್’ಪ್ರೈಸಸ್ ಮಾಲಕ ದೀಪಕ್ ಗಂಗೂಲಿ ಅವರು FACERA ಫ್ಯಾಷನ್ ಡಿಸೈನ್ ಸಂಘವನ್ನು ಉದ್ಘಾಟಿಸಿ, ಪ್ರಸ್ತುತ ಕಾಲಘಟ್ಟದಲ್ಲಿ ಫ್ಯಾಷನ್ ಎಂಬುದು ಅತೀ ಮುಖ್ಯ. ಅದೇ ರೀತಿ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಶುಭ ಹಾರೈಸಿದರು.

Vanzova Facito ಸೀಸನ್ – 1 ಫ್ಯಾಷನ್ ಶೋವನ್ನು ಕನ್ನಡ ಸಿನಿಮಾ ನಟ ಆರ್ಯನ್ ಉದ್ಘಾಟಿಸಿ, ಚಿತ್ರ ರಂಗದಲ್ಲಿ ಫ್ಯಾಷನ್ ಲೋಕದ ಪಾಲು ದೊಡ್ಡದಿದೆ. ಹಾಗೆಯೇ ಈ ಕಾಲೇಜಿನಿಂದ  ಫ್ಯಾಷನ್ ರಂಗಕ್ಕೆ ಇನ್ನಷ್ಟು ಪ್ರತಿಭೆಗಳು ಮೂಡಿ ಬರುವಂತಾಗಲಿ ಎಂದು ಶುಭ ಹಾರೈಸಿದರು.



































 
 

ಅಧ್ಯಕ್ಷತೆ ವಹಿಸಿದ್ದ ಜಯಂತ್ ನಡುಬೈಲು ಅವರು Aqiula ಬ್ಲಾಗ್ ಪೇಜ್ ಅನ್ನು ಉದ್ಘಾಟಿಸಿ ಶುಭ ಕೋರಿದರು. ಮಿಸ್ಟರ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ವಚನ್ ಎಸ್ ಅವರನ್ನು ಗೌರವಿಸಲಾಯಿತು.

ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥ ಕಿಶನ್ ಎನ್. ರಾವ್, ಅಸೋಸಿಯೇಷನ್ ಸಂಯೋಜಕಿ ದೀಪ್ತಿ ಉಪಸ್ಥಿತರಿದ್ದರು. ಅಸೋಸಿಯೇಷನ್ ಅಧ್ಯಕ್ಷೆ ವಿದ್ಯಾಶ್ರೀ ಸ್ವಾಗತಿಸಿ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥ ಕಿಶನ್ ಎನ್. ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶ್ರದ್ದಾ ವಂದಿಸಿದರು. ಧಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top