ಡಿವೈನ್ ಪಾರ್ಕ್ ಅಂಗಸಂಸ್ಥೆ ಸವಣೂರು ವಿವೇಕ ಜಾಗೃತಿ ಬಳಗದಿಂದ ‘ವಾತ್ಸಲ್ಯ ಶ್ರೀ’ ವಿಶೇಷ ಸತ್ಸಂಗ

ಕಾಣಿಯೂರು: ಸಾಲಿಗ್ರಾಮದ ಡಿವೈನ್ ಪಾರ್ಕ್  ಅಂಗಸಂಸ್ಥೆಯಾದ ಚಾರ್ವಾಕ, ಸವಣೂರು ವಿವೇಕ ಜಾಗೃತಿ ಬಳಗದ ವತಿಯಿಂದ ವಾತ್ಸಲ್ಯ ಶ್ರೀ ವಿಶೇಷ ಸತ್ಸಂಗ ಕಾರ್ಯಕ್ರಮ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ gold man saches company ಯ ಉಪಾಧ್ಯಕ್ಷ ಪ್ರದೀಪ್ ಆರ್. ಗೌಡ ಆರುವಗುತ್ತು ಮಾತನಾಡಿ, ಸ್ವಾಮಿ ವಿವೇಕಾನಂದರು ಜಗತ್ತಿಗೆ ಸನಾತನ ಹಿಂದೂ ಧರ್ಮದ ಶ್ರೇಷ್ಟತೆಯನ್ನು ಸಾರಿದ ಮಹಾನ್ ಚೇತನ. ಅವರ ಆದರ್ಶದ ನೆರಳಿನಲ್ಲಿ ಸಾಗುವ ವಿವೇಕ ಜಾಗೃತ ಬಳಗದ ಇಂತಹ ಕಾರ್ಯಕ್ರಮ ಅಪ್ರತಿಮ ಎಂದರು.

ಅಧ್ಯಕ್ಷತೆ ವಹಿಸಿದ್ದ ವಚನ ಪ್ರದೀಪ್ ಮಾತನಾಡಿ, ಗರ್ಭಿಣಿಯಾಗಿರುವ ಮಹಿಳೆಗೆ 9 ತಿಂಗಳು ಮತ್ತು ಬಾಣಂತನ 9 ತಿಂಗಳ ಮನೋ ಸಂಸ್ಕಾರವನ್ನು ಸಾರುವ ಈ ಕಾರ್ಯಕ್ರಮ ಕಂಡು ಕೇಳರಿಯದ ವೈಶಿಷ್ಟ್ಯ ಹೊಂದಿದೆ ಎಂದರು.



































 
 

ಸಂಪನ್ಮೂಲ ವ್ಯಕ್ತಿಗಳಾಗಿ  ಡಾ. ಮಾಧವ ಪೈ, ವೈದ್ಯಕೀಯ ವಿಜ್ಞಾನಕ್ಕೆ ಸವಾಲಾಗಿರುವ ಆಧ್ಯಾತ್ಮಿಕ ರಹಸ್ಯಗಳು ಮಾನವ ಜೀವನದ ವಿಕಸನಕ್ಕೆ ಸಂಜೀವಿನಿ ಆಗಿವೆ ಎಂದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಪ್ರೇಮಕಲ ದಾಮೋದರ್ ಮೂಡಬಿದ್ರೆ, ಗರ್ಭಿಣಿ ಮಹಿಳೆಯ ಆಚಾರ, ವಿಚಾರ, ಆಹಾರ ಪದ್ಧತಿ, ಯೋಚನೆಗಳು ಗರ್ಭಸ್ಥ ಮಗುವಿನ ಮೇಲೆ. ನೇರ ಪರಿಣಾಮ ಬೀರುತ್ತವೆ. ಎಚ್ಚರ ತಪ್ಪಿದರೆ ಮಗುವಿನಲ್ಲಿ ಅಂಗವೈಕಲ್ಯವೂ ಕಾಣಿಸಬಹುದು ಎಂದು ಎಚ್ಚರಿಸಿದರು.

ಸಮಾರೋಪ ಸಮಾರಂಭದಲ್ಲಿ ನ್ಯಾಯವಾದಿ ಮಾಚೀಲ ವೆಂಕಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ವಿಶಾಲಾಕ್ಷಿ ಕೋಲ್ಪೆ ಅನಿಸಿಕೆ ವ್ಯಕ್ತಪಡಿಸಿದರು.

ಸರಸ್ವತಿ ಅಭಿಕಾರ್. ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಮೊಕ್ತೇಸರ ಮಾಚಿಲ ನಾರ್ಣಪ್ಪ ಗೌಡ, ಆಡಳಿತ ಪಂಗಡ ಸಮಿತಿ ಸದಸ್ಯ ಶೀನಪ್ಪ ಗೌಡ ಉಪಸ್ಥಿತರಿದ್ದರು. ಸಿ.ಜೆ. ಚಂದ್ರಕಲ ಆರುವಗುತ್ತು, ಲಕ್ಷ್ಮಣ ಕರಂದ್ಲಾಜೆ, ಪ್ರವೀಣ್ ಕುಂಟ್ಯಾನ, ದೇವಿಪ್ರಸಾದ ಸಜಂಕು,  ದರ್ಣ ಪ್ಪ ಅಂಬುಲ, ವಿಶ್ವನಾಥ ಅಂಬುಲ, ಮನೋಹರ್ ಮಂಗಳೂರು, ಸತ್ಯನಾರಾಯಣ ಮಾಡಾವು ವಿಶೇಷ ಆಹ್ವಾನಿತರಾಗಿದ್ದರು. ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ, ಸುಬ್ರಹ್ಮಣ್ಯದ ಕಾರ್ಯಕರ್ತರು ಸಹಕರಿಸಿದರು.

ಸುಬ್ರಮಣ್ಯ ವಿವೇಕ ಜಾಗೃತ ಬಳಗದ ಸಿ- 2 ಅಧಿಕಾರಿ ಸುಂದರ ಗೌಡ ಏನೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಅಧ್ಯಕ್ಷೆ ಸುನಂದ ಕರಂದ್ಲಾಜೆ ಸ್ವಾಗತಿಸಿದರು. ಸುಮಿತ್ರಾ ವಸಂತ ವಾಕಿಲ ವಂದಿಸಿದರು. ಕೆ.ವಿ. ಮಾಧವ ಕರಂದ್ಲಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top