ಸ್ಟಾಕ್‌ಹೋಂ: ಮೌಂಗಿ ಬವೆಂಡಿ, ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ಅವರಿಗೆ ಸಣ್ಣ ಕ್ವಾಂಟಮ್ ಡಾಟ್‌ಗಳ (ಅರೆವಾಹಕ ನ್ಯಾನೊಕ್ರಿಸ್ಟಲ್) ಕೆಲಸಕ್ಕಾಗಿ ಈ ಸಾಲಿನ ಪ್ರತಿಷ್ಠಿತ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ಅವರು ಬುಧವಾರ ಸ್ಟಾಕ್‌ಹೋಮ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ.
ಮೂವರು ಸಂಶೋಧಕರು ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೌಂಗಿ ಬವೆಂಡಿ, ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದ ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ನ್ಯೂಯಾರ್ಕ್‌ನ ನ್ಯಾನೊಕ್ರಿಸ್ಟಲ್ಸ್ ಟೆಕ್ನಾಲಜಿಯವರಾಗಿದ್ದಾರೆ. ಕ್ವಾಂಟಮ್ ಡಾಟ್‌ಗಳು ಕೆಲವೇ ನ್ಯಾನೊಮೀಟರ್‌ಗಳ ಗಾತ್ರವನ್ನು ಹೊಂದಿದ್ದು, ಕಂಪ್ಯೂಟಿಂಗ್, ಲೇಸರ್‌ಗಳು ಮತ್ತು ಸೂಕ್ಷ್ಮದರ್ಶಕದಲ್ಲಿ ಬಳಸಲಾಗುತ್ತಿದೆ.
ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋನರ್ (1 ಮಿಲಿಯನ್ ಡಾಲರ್) ನಗದು ಪ್ರಶಸ್ತಿಯನ್ನು ಹೊಂದಿರುತ್ತವೆ. ಪ್ರಶಸ್ತಿಗಳ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು 1896ರಲ್ಲಿ ನಿಧನ ಹೊಂದಿದ ವೇಳೆ ಬರೆದಿದ್ದ ಉಯಿಲಿನಿಂದ ಪ್ರಶಸ್ತಿ ನೀಡಲಾಗುತ್ತದೆ.