ವಿದ್ಯಾಧಿದೇವತೆ ಸರಸ್ವತಿ. ಮಾತು, ಬರಹ, ಪಾಂಡಿತ್ಯ ಇವಾವುದನ್ನೇ ಆರಂಭಿಸುವುದಿದ್ದರೂ ಸರಸ್ವತಿಗೆ ಅಗ್ರ ಪೂಜೆ. ಹಾಗಾಗಿ ತಾಯಿ ಸರಸ್ವತಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು, ವಾತ್ಸಲ್ಯ.
ಇಂತಹ ಶಾರದಾ ಮಾತೆಯನ್ನು ಕೊಂಡಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ಈ ಹಿನ್ನೆಲೆಯಲ್ಲಿ ಜನಮನದ ಪ್ರತಿಧ್ವನಿಯಾಗಿರುವ `ನ್ಯೂಸ್ ಪುತ್ತೂರು’ ಈ ಬಾರಿಯ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸರಸ್ವತಿ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಿದೆ.
ಆಸಕ್ತರು ನಿಮ್ಮ ಮನೆಯಲ್ಲೇ ಇದ್ದುಕೊಂಡು, ನೀವೇ ಹಾಡಿದ ಸರಸ್ವತಿ ಗೀತೆಯ ವಿಡಿಯೋವನ್ನು ನಮಗೆ ಕಳುಹಿಸಿಕೊಡಿ. ನೀವು ಹಾಡಿರುವ ಗೀತೆಯನ್ನು ನುರಿತ ತೀರ್ಪುಗಾರರು ಪರಾಮರ್ಶಿಸಲಿದ್ದಾರೆ. ಆಯ್ದ 25 ಸರಸ್ವತಿ ಗೀತೆಗಳನ್ನು ನವರಾತ್ರಿ ದಿನಗಳಲ್ಲಿ ನ್ಯೂಸ್ ಪುತ್ತೂರು ಪ್ರಸಾರ ಮಾಡಲಿದೆ. ಆಯ್ಕೆಯಾದ 25 ಗೀತೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಗಳಿಗೆ ಪ್ರಮಾಣ ಪತ್ರ, ಟ್ರೋಫಿ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು. ಪ್ರೋತ್ಸಾಹಕರ ಬಹುಮಾನಗಳೂ ಇರುತ್ತವೆ.
ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಮೊದಲನೆಯದ್ದು ಶಾಲಾ ವಿದ್ಯಾರ್ಥಿಗಳ ವಿಭಾಗ ಹಾಗೂ ಎರಡನೆಯದ್ದು ಸಾರ್ವಜನಿಕ ವಿಭಾಗ. ಶಾಲಾ ವಿದ್ಯಾರ್ಥಿಗಳು ಅಂದರೆ ಎಸ್.ಎಸ್.ಎಲ್.ಸಿ. ಮತ್ತು ಅದಕ್ಕಿಂತ ಕೆಳಗಿನ ತರಗತಿ ವಿದ್ಯಾರ್ಥಿಗಳು. ಸಾರ್ವಜನಿಕ ವಿಭಾಗದಲ್ಲಿ ಸಾರ್ವಜನಿಕರು ಹಾಗೂ ಪಿಯುಸಿ ಮತ್ತು ಅದಕ್ಕಿಂತ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳೂ ಸರಸ್ವತಿ ಗೀತೆಯನ್ನು ಹಾಡಿ ಕಳುಹಿಸಬಹುದು.
ಸ್ಪರ್ಧೆಗೆ ನಿಮ್ಮ ಹಾಡಿನ ವಿಡಿಯೋ ಕಳುಹಿಸಿಕೊಡಲು ಕೊನೆಯ ದಿನಾಂಕ ಅಕ್ಟೋಬರ್ 13, ಶುಕ್ರವಾರ ಮಧ್ಯರಾತ್ರಿ ಗಂಟೆ 12.00
ಸ್ಪರ್ಧೆಯ ಷರತ್ತುಗಳು ಹೀಗಿವೆ:
– ಸ್ಪರ್ಧೆಗಳು ವೈಯಕ್ತಿಕ ವಿಭಾಗದಲ್ಲಿ ಮಾತ್ರ ನಡೆಯಲಿವೆ.
– ಸ್ಪರ್ಧೆಯ ಅವಧಿ 3 + 1 = 4 ನಿಮಿಷಗಳು.
– ಕರೋಕಿ ಬಳಕೆಗೆ ಅವಕಾಶವಿಲ್ಲ.
– ಗಾಯನದ ಜೊತೆಗೆ ನೀವೇ ಸ್ವತಃ ಬಳಸುವ ಸಂಗೀತ ಉಪಕರಣಗಳಿಗೆ (ಶ್ರುತಿ ಪೆಟ್ಟಿಗೆ, ಹಾರ್ಮೋನಿಯಂ, ತಂಬೂರಿ, ತಾಳ, ಟಮ್ಕಿ) ಅವಕಾಶವಿದೆ.
– ಗಾಯಕ / ಗಾಯಕಿಯ ಭಾವಚಿತ್ರ, ಪೂರ್ಣ ಹೆಸರಿನೊಂದಿಗೆ ವಿಳಾಸ, ಸಂಪರ್ಕ ಸಂಖ್ಯೆಯನ್ನು ಕಳುಹಿಸಬೇಕು. ವಿದ್ಯಾರ್ಥಿಗಳು ಭಾವಚಿತ್ರ, ಹೆಸರು, ವಿಳಾಸದೊಂದಿಗೆ ಶಾಲಾ ಹೆಸರು, ತರಗತಿ ಮತ್ತು ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ ಕಳುಹಿಸಿಕೊಡಬೇಕು.
– ತೀರ್ಪುಗಾರರ ತೀರ್ಮಾನವೇ ಅಂತಿಮ.
– ಬಹುಮಾನ ವಿಜೇತರ ಹೆಸರುಗಳನ್ನು ವಿಜಯ ದಶಮಿಯಂದು ಪ್ರಕಟಿಸಲಾಗುವುದು. ವಿಡಿಯೋವನ್ನು ಕಳುಹಿಸಬೇಕಾದ WhatsApp ಸಂಖ್ಯೆ: 91083 82821