ಉಪ್ಪಿನಂಗಡಿ: ಇಚ್ಲಂಪಾಡಿ ಗ್ರಾಮದ ಯುವಕನೋರ್ವ ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉರೆಜಾಲು ನಿವಾಸಿ ಜೋಜು ಜೋಸೆಫ್ (35) ನಾಪತ್ತೆಯಾದವರು. ಕೂಲಿ ಕೆಲಸ ಮಾಡುತ್ತಿದ್ದ ಇವರು ಸೆ. 30ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಸುಬ್ರಹ್ಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು ರಾತ್ರಿಯಾದರೂ ವಾಪಾಸು ಮನೆಗೆ ಬಂದಿಲ್ಲ. ಪೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದಾಗ ಪೋನ್ ಸ್ವಿಚ್ ಆಪ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇವರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೇಸ್ತ್ರಿ ಪ್ರಶಾಂತ್ ಅವರಿಗೆ ರಾತ್ರಿ ಕರೆ ಮಾಡಿ ವಿಚಾರಿಸಿದಾಗ, ಜೋಸೆಫ್ ಈ ದಿನ ಕೆಲಸಕ್ಕೆ ಬಂದಿರುವುದಿಲ್ಲ. ಸಂಜೆ ಹಣ ಬೇಕೆಂದು ಕೇಳಿದ್ದು, ನೆಲ್ಯಾಡಿಗೆ ತೆರಳಿ ಹಣ ನೀಡಿದ್ದೇನೆ. ಹಣ ಪಡೆದುಕೊಂಡು ತೆರಳಿರುತ್ತಾರೆ ಎಂದು ತಿಳಿಸಿದ್ದಾರೆ.
ಬಳಿಕ ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದರೂ ಈ ತನಕ ಪತ್ತೆಯಾಗಿರುವುದಿಲ್ಲ ಎಂದು ಜೋಜು ಜೋಸೆಫ್ ಅವರ ತಂದೆ ಟಿ.ವಿ. ಜೋಸೆಫ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.