ಸಮವಸ್ತ್ರ ಹಾಕಿಕೊಂಡೇ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ! | ಪತ್ನಿಯ ಅಗಲುವಿಕೆ ಸಹಿಸದೇ ನೇಣಿಗೆ ಕೊರಳೊಡ್ಡಿದರೇ?

ಶಿವಮೊಗ್ಗ: ಪತ್ನಿಯ ಅಗಲುವಿಕೆಯಿಂದ ಮನನೊಂದ ಪೊಲೀಸ್ ಹೆಡ್ ಕಾನ್ಸ್’ಟೇಬಲ್ ಒಬ್ಬರು ಪೊಲೀಸ್ ಸಮವಸ್ತ್ರ ಧರಿಸಿಕೊಂಡೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ವಿನೋಬನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಜಯಪ್ಪ ಎಂದು ಗುರುತಿಸಲಾಗಿದೆ.

ಜಯಪ್ಪ ಅವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿದ್ದರು.



































 
 

ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದ ಜಯಪ್ಪ ಅವರು ಮನೆಗೆ ವಾಪಸ್ ತೆರಳಿದ್ದರು. ಹೀಗೆ ಹಿಂದಿರುಗುವಾಗ ಹಗ್ಗ ಖರೀದಿಸಿಕೊಂಡಿದ್ದರು. ಮನೆಗೆ ತೆರಳಿದವರೇ, ಮನೆ ಮೇಲ್ಭಾಗದಲ್ಲಿ ಹಾಕಲಾಗಿರುವ ಬೀಮ್’ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದಷ್ಟೇ ಜಯಪ್ಪ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top