ಬೆಳ್ತಂಗಡಿ: ಇಲ್ಲಿನ ಗರ್ಡಾಡಿ ಗ್ರಾಮದ ಉಳ್ಳಿಂಜ ಜಯರಾಮ್ ಭಟ್ ಅವರ ತೋಟದಲ್ಲಿ ವಿಶೇಷ ಅಡಿಕೆ ಗಿಡವೊಂದು ಗಮನ ಸೆಳೆದಿದೆ.
ಒಂದೇ ಅಡಿಕೆಯಲ್ಲಿ ಒಂದೇ ಗಿಡ – ಇದು ಪ್ರಕೃತಿ ನಿಯಮ. ಆದರೆ ಕೆಲವೊಂದು ಸಲ ಈ ನಿಯಮಗಳನ್ನೇ ಪ್ರಕೃತಿ ಮೀರಿ ನಿಲ್ಲುವುದುಂಟು. ಸಸ್ಯ ಸಂಕುಲಗಳಲ್ಲಿಯೂ ಇದು ಹೊಸತಲ್ಲ. ಇಂತಹ ಗಿಡಗಳಿಗೆ ನಮ್ಮ ಹಿರಿಯರು ಒಂದೊಂದು ಹೆಸರನ್ನು ಇಟ್ಟಿದ್ದಾರೆ.
ಇದೇ ರೀತಿಯ ಗಿಡವೊಂದು ಉಳ್ಳಿಂಜದಲ್ಲಿ ಕಂಡುಬಂದಿದೆ. ಒಂದೇ ಅಡಿಕೆಯಲ್ಲಿ ನಾಲ್ಕು ಗಿಡಗಳು ಬೆಳೆದಿವೆ. ಇದನ್ನು ಪೂಗಸಿರಿ ಎಂದು ಕರೆಯಲಾಗುತ್ತದೆ ಎಂದು ಹಿರಿಯರು ವಿಶ್ಲೇಷಿಸುತ್ತಾರೆ ಎಂದು ಹೇಳಲಾಗಿದೆ.
ಪ್ರಕೃತಿಯ ವೈಚಿತ್ರಗಳ ಸಾಲಿಗೆ ಈ ಅಡಿಕೆ ಗಿಡವು ಒಂದು ಸೇರ್ಪಡೆ. ಒಟ್ಟಿನಲ್ಲಿ ಪ್ರಕೃತಿಯ ಔಚಿತ್ಯಕ್ಕೆ ನಾವು ತಲೆಬಾಗಲೇಬೇಕು.
ಬರಹ: ಕುಮಾರ್ ಪೆರ್ನಾಜೆ
ಚಿತ್ರ: ರವೀಂದ್ರ ಭಟ್ ಉಳ್ಳಿಂಜ