ಮಹಾಲಿಂಗ ಅಂದರೆ ತ್ರಿಮೂರ್ತಿಗಳ ಸಂಗಮ: ಪಿ.ಜಿ. ಜಗನ್ನಿವಾಸ ರಾವ್ | ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಪದಗ್ರಹಣ

ಪುತ್ತೂರು: ಅರ್ಚಕನ ಪ್ರಭಾವ ಮತ್ತು ಸಂಸ್ಕಾರದಿಂದ ಶಿಲೆಯಾದ ಮೂರ್ತಿ ಶಂಕರನಾಗುತ್ತದೆ. ದೇವರ ಸ್ವರೂಪ ಪಡೆಯುತ್ತದೆ. ಇಲ್ಲಿ ಅರ್ಚಕನೆಂದರೆ ಯಾರೆಲ್ಲಾ ತ್ರಿಕರಣ ಪೂರ್ವಕವಾಗಿ ಶಿಲೆಯಲ್ಲಿ ದೇವರನ್ನು ಏಕನಿಷ್ಠೆಯಿಂದ ಕಾಣುತ್ತಾರೋ ಆ ಭಕ್ತರೆಲ್ಲರೂ ಒಂದು ರೀತಿಯಿಂದ ಅರ್ಚಕರೇ ಆಗುತ್ತಾರೆ. ಭಗವಂತನನ್ನು ತ್ರಿಕರಣಪೂರ್ವಕವಾಗಿ ಭಜಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪುತ್ತೂರು ನಗರಸಭಾ ಸದಸ್ಯ, ಪಿ.ಜಿ. ಜಗನ್ನಿವಾಸ ರಾವ್ ಹೇಳಿದರು.

ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಹಾಲಿಂಗ ಅಂದರೆ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಗಮ ಎಂದ ಅವರು ವೇದ, ಆಗಮ ಶಾಸ್ತ್ರಗಳಲ್ಲಿ ಹೇಳಲ್ಪಟ್ಟ ಪ್ರದಕ್ಷಿಣಾ ಪದ್ದತಿ, ಶಿವನ ಸನ್ನಿಧಿಯಲ್ಲಿರುವ ಇತರ ದೇವ ಸಾನ್ನಿಧ್ಯಗಳ ಮಹತ್ವವನ್ನು ವಿಶದೀಕರಿಸಿ, ಟ್ರಸ್ಟ್ ನ ಚಟುವಟಿಕೆಗಳು ಹತ್ತೂರಿಗೆ ಪಸರಿಸಲಿ ಎಂದು ಶುಭ ಹಾರೈಸಿದರು.































 
 

ಅಧ್ಯಕ್ಷತೆ ವಹಿಸಿದ್ದ ನಿಕಟ ಪೂರ್ವಾಧ್ಯಕ್ಷ ಜಗನ್ನಾಥ ಪೂಜಾರಿ ಮಾತನಾಡಿ, ಭಜನೆಯೊಂದಿಗೆ ಸೇವಾ ಮನೋಭಾವ ಮೈಗೂಡಿಸಿಕೊಂಡು ಟ್ರಸ್ಟ್ ನ ಕೀರ್ತಿಪತಾಕೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಸಂಚಾಲಕ ಗೋಪಾಲಕೃಷ್ಣ ಅವರು ಟ್ರಸ್ಟ್ ನ ರೂಪುರೇಶೆಗಳನ್ನು ವಿವರಿಸಿ, ಭಜನೆಯ ಜೊತೆಗೆ ಪರಸ್ಪರ ಹೊಂದಾಣಿಕೆ, ಸಹಕಾರದೊಂದಿಗೆ ಟ್ರಸ್ಟ್ ನ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ ಎಂದರು.

ಗೌರವಾಧ್ಯಕ್ಷ ಪಕೀರ ಗೌಡ, ಭಾರತಿ, ನೂತನ ಸದಸ್ಯ ನೇಮಿರಾಜ್ ತಮ್ಮ ಅನಿಸಿಕೆ ಹಂಚಿಕೊಂಡರು. ಟ್ರಸ್ಟ್ ಕೋಶಾಧಿಕಾರಿ ಧನುಷಾ ಪ್ರಾರ್ಥಿಸಿದರು. ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಭಾವತಿ ವಂದಿಸಿದರು. ನೂತನ ಅಧ್ಯಕ್ಷೆ ಶಾರದಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top