ಪುತ್ತೂರು: ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಸ್ಪಷ್ಟವಾಗಿ ಓದಲು ಕಲಿಸುವ ತರಗತಿಗಳನ್ನು ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ.
ತರಗತಿಯ ಅವಧಿ ಒಂದು ಗಂಟೆಯಾಗಿದ್ದು, 140 ದಿವಸಗಳಲ್ಲಿ ನಿರಂತರವಾಗಿ, ನಿಯಮಿತವಾಗಿ ಸೇರಬೇಕಾದ್ದು ಕಡ್ಡಾಯ. ಹೊಸ ತರಗತಿಗಳ ಸಮಯ ಈ ಕೆಳಗಿನಂತಿದೆ.
ಮಧ್ಯಾಹ್ನ 3 ಗಂಟೆ , ಸಂಜೆ 6.30 ಹಾಗೂ ರಾತ್ರಿ 7.30, 8 ಹಾಗೂ 8.30. ಭಗವದ್ಗೀತೆ ಕಲಿಯಲು ಆಸಕ್ತಿ ಇರುವವರು ಈ ಕೆಳಗಿನ ಗೂಗಲ್ ಫಾರ್ಮನ್ನು ಅ.2, 2023ರ ಒಳಗೆ ಭರ್ತಿ ಮಾಡಿ ಕಳಿಸಬೇಕು. ಗೂಗಲ್ ಫಾರ್ಮ್ ಭರ್ತಿ ಮಾಡಿದವರೆಲ್ಲರಿಗೂ ಸಂದರ್ಶನದ ಮಾಹಿತಿಯನ್ನು ಗುಂಪಿನಲ್ಲಿ ತಿಳಿಸಲಾಗುವುದು. ವೈಯಕ್ತಿಕವಾಗಿ ತಿಳಿಸಲಾಗುವುದಿಲ್ಲ. ತರಗತಿಗೆ ನಿರಂತರ ಸೇರಿಕೊಳ್ಳಲು ಸಿದ್ದರಿರುವವರು ಮಾತ್ರ ಗೂಗಲ್ ಫಾರ್ಮ್ ಭರ್ತಿ ಮಾಡಿದರೆ ಸಾಕು. ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಸಂಚಾಲಕರು, ಗೀತಾಜ್ಞಾನ ಯಜ್ಞ ಸಮಿತಿ ಮೊ: 9446653093 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.