ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಗಡುವನ್ನು ಮತ್ತೆ ವಿಸ್ತರಿಸಿದೆ.
ಇದಕ್ಕೂ ಮೊದಲು ಆರ್ ಬಿಐ ಸೆಪ್ಟೆಂಬರ್ 30ರಂದು ನೋಟು ವಿನಿಮಯಕ್ಕೆ ಕೊನೆ ದಿನವೆಂದು ಘೋಷಿಸಿತ್ತು. ಅದರಂತೆ ಹೆಚ್ಚಿನ ಗ್ರಾಹಕರು ಬ್ಯಾಂಕ್ ಗೆ ತೆರಳಿ ನೋಟು ವಿನಿಮಯ ಮಾಡಿಕೊಂಡಿದ್ದಾರೆ. ಆದರೆ ಆರ್ ಬಿಐ ಇಂದು ಹೊಸ ಪ್ರಕಟಣೆ ಹೊರಡಿಸಿದ್ದು, ಅದರಂತೆ ನೋಟು ವಿನಿಮಯ ಮಾಡಿಕೊಳ್ಳದೆ ಬಾಕಿ ಉಳಿದಿರುವ ಗ್ರಾಹಕರು ಅಕ್ಟೋಬರ್ 7ರವರೆಗೆ ಅವಕಾಶ ಕಲ್ಪಿಸಿದೆ.
ಅದರಂತೆ ಗ್ರಾಹಕರು ಒಂದು ವೇಳೆ ನೋಟು ವಿನಿಮಯ ಮಾಡಿಕೊಳ್ಳದಿದ್ದಲ್ಲಿ ಇನ್ನು ಬಾಕಿ ಉಳಿದಿರುವ ಏಳು ದಿನಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ.