ಪುತ್ತೂರು: ಅ.15 ರಿಂದ 24ರ ತನಕ ನಡೆಯುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶಾರದಾ ಭಜನಾ ಮಂದಿರದ 89ನೇ ವರ್ಷದ ವೈಭವದ ಪುತ್ತೂರು ಶಾರದೋತ್ಸವದ ಲಾಂಛನ ಮತ್ತು ಆಮಂತ್ರಣ ಬಿಡುಗಡೆ ಮಾಡಲಾಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಡಾ.ಸುರೇಶ್ ಪುತ್ತೂರಾಯ ಲಾಂಛನ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಜತೆ ಕಾರ್ಯದರ್ಶಿ ಗೋಪಾಲಕೃಷ್ಣ, ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ್ ಹೆಚ್, ಸುಧೀರ್, ಜಯಕಿರಣ್, ಉದಯ ಹೆಚ್., ಪಕೀರ ಗೌಡ, ಹೆಚ್. ವಿಜಯಾ, ಕೃಷ್ಣ ಪಿ.ಜಿ., ಗಣೇಶ್, ವಸಂತ್, ಗೋಪಾಲ ಆಚಾರ್ಯ, ಗುಲಾಬಿ ಮತ್ತಿತರರು ಉಪಸ್ಥಿತರಿದ್ದರು.
ಈ ಭಾರಿ ಮೈಸೂರು, ಮಡಿಕೇರಿ ಮಂಗಳೂರು ದಸಾರದ ವೈಭವವನ್ನು ಪುತ್ತೂರಿನಲ್ಲಿ ನೋಡಬಹುದು. ಮೂರು ಸಾವಿರ ಭಜನ ಮತ್ತು ಕುಣಿತ ಭಜನ ತಂಡ 50ಕ್ಕಿಂತಲೂ ಹೆಚ್ಚು ಸ್ಥಬ್ದ ಚಿತ್ರಗಳ ಕೂಡುವಿಕೆ, ಅನೇಕ ವಿನೋದಾವಳಿ ನೃತ್ಯದ ಮೂಲಕ ಮನರಂಜನಾ ಶೋಭಯಾತ್ರೆ ಪುತ್ತೂರು ಪೇಟೆಯಲ್ಲಿ ನಡೆಯಲಿದೆ. ಸಮಸ್ತ ಪುತ್ತೂರು ಮಹಾಜನತೆಯ ಸಹಕಾರದಿಂದ ಹತ್ತು ದಿನವು ಅನ್ನದಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.