ಪುತ್ತೂರು: ವಿಜಯ ಸಾಮ್ರಾಟ್ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪಿಲಿಗೊಬ್ಬು ಸ್ಪರ್ಧೆ ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮದ ಚಪ್ಪರ ಮುಹೂರ್ತ ಶನಿವಾರ ನಡೆಯಿತು.
ಪುತ್ತೂರು ವಿಜಯ ಸಾಮ್ರಾಟ್ ನ ಸ್ಥಾಪಕಾಧ್ಯಕ್ಷ ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಕಾರ್ಯಕ್ರಮದ ಚಪ್ಪರ ಮುಹೂರ್ತವನ್ನು ದೇವಸ್ಥಾನದ ಅರ್ಚಕ ಉದಯಕೃಷ್ಣ ಭಟ್ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಹಜ್ ರೈ ಬಳಜ್ಜ, ನಾಗರಾಜ್ ನಡುವಡ್ಕ, ಶರತ್ ಕುಮಾರ್ ಮಾಡಾವು, ಶಂಕರ್ ಭಟ್ ಈಶಾನ್ಯ, ರಾಜೇಶ್ ಗೌಡ, ಅಶೋಕ್ ಅಡೂರು, ಪ್ರೀತಮ್ ರೈ ಪೆರ್ನೆ, ಮಧು ಕುಮಾರ್, ರಾಜೇಶ್ ಬನ್ನೂರು, ರಾಧಾಕೃಷ್ಣ ಬೋರ್ಕರ್, ಅಜಿತ್ ರೈ ಹೊಸಮನೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.