ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಸಹೋದರಿ ನಳಿನಿ ಶೆಟ್ಟಿ ಶನಿವಾರದಂದು ಶಾಸಕರನ್ನು ಭೇಟಿಯಾಗಲು ಶಾಸಕರ ಕಚೇರಿಗೆ ಬಂದಿದ್ದರು.
ಶಾಸಕರನ್ನು ಭೇಟಿಯಾಗಲು ಬಂದಿರುವ ಸಾರ್ವಜನಿಕರ ಸಂಖ್ಯೆಯೂ ಅಪಾರವಾಗಿತ್ತು. ತನ್ನ ಸಹೋದರಿ ತನಗಾಗಿ ಕಾಯುತ್ತಿದ್ದಾರೆ ಎಂಬ ವಿಚಾರ ಶಾಸಕರಿಗೆ ಗೊತ್ತಿತ್ತು. ಆದರೆ ಶಾಸಕರು ತನ್ನ ಸಹೋದರಿಯನ್ನು ಕರೆಯಲಿಲ್ಲ. ಸರತಿ ಸಾಲಿನಲ್ಲೇ ಬಂದ ನಳಿನಿ ಶೆಟ್ಟಿಯವರು ಅರ್ಜಿ ಸಲ್ಲಿಸಿ ಅಲ್ಲಿಂದ ತೆರಳಿದರು.
ಶಾಸಕರ ಈ ನ್ಯಾಯದ ನಡೆ ಅಲ್ಲಿದ್ದವರಿಗೆ ಶಾಸಕರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿತು. ಅಧಿಕಾರದಲ್ಲಿರುವವರು ರಾಜಧರ್ಮ ಪಾಲಿಸಬೇಕಾಗಿರುವುದು ಕರ್ತವ್ಯ. ಆದರೆ ಕೆಲವರು ಆ ಕರ್ತವ್ಯವನ್ನು ಮರೆತು ಅಧಿಕಾರ ಅನುಭವಿಸಿದವರೂ ಇದ್ದಾರೆ. ಆದರೆ ಪುತ್ತೂರು ಶಾಸಕರು ಈ ವಿಚಾರದಲ್ಲಿ ತಮ್ಮ ಕರ್ತವ್ಯವನ್ನು ಮರೆತಿಲ್ಲ ಎನ್ನುವುದನ್ನು ತೋರಿಸಿದ್ದಾರೆ.