ಪುತ್ತೂರು: ಅರಣ್ಯ ಇಲಾಖಾ ಶೌರ್ಯ ಮತ್ತು ದಿಟ್ಟತನ ಕರ್ತವ್ಯಕ್ಕೆ 2020-21ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ಪುತ್ತೂರು ವಲಯದ ಗಸ್ತು ಅರಣ್ಯಪಾಲಕ ರಾಜುಚಂದ್ರ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು.
ರಾಜುಚಂದ್ರ ಅವರು ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ನಕ್ಸಲರು ವನ್ಯಜೀವಿ ಕಚೇರಿಗೆ ಬೆಂಕಿ ಹಾಕಿದ ಸಂದರ್ಭ ಧೃತಿಗೆಡದೆ ಕರ್ತವ್ಯ ನಿರ್ವಹಿಸಿದ್ದರು. ಪುತ್ತೂರು ಶಾಖೆಯಲ್ಲಿ ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ವಿವಿಧ ಅರಣ್ಯ ಅಪರಾಧ ಪತ್ತೆಹಚ್ಚಿರುತ್ತಾರೆ. ಅಕ್ರಮ ಅರಣ್ಯ ಸಂಪತ್ತು ಸಾಗಾಟ ಮಾಡುತ್ತಿದ್ದ 21 ವಾಹನಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೆ ಪಿಲಿಗೊಂಡದಲ್ಲಿ ಕೃಷ್ಣಮೃಗ ಚರ್ಮ ಸಾಗಾಟ ಮಾಡಲು ಯತ್ನಿಸಿದವರನ್ನು ತಡೆದು ಪ್ರಕರಣ ದಾಖಲಿಸಿರುತ್ತಾರೆ. ರಾಜುಚಂದ್ರ ಅವರ ಕಾರ್ಯವನ್ನು ಗುರುತಿಸಿ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ, ಗೌರವಿಸಲಾಗಿದೆ.