ಪುತ್ತೂರು: ಭಾರತ ಸರಕಾರದ ಮಾನ್ಯತೆ ಪಡೆದಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆ ಸೆ. 28ರಂದು ಸುಳ್ಯ ರಥಬೀದಿಯಲ್ಲಿನ ಟಿ.ಎ.ಪಿ.ಸಿ.ಎಂ.ಎಸ್. ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.
ವಿದ್ಯಾಮಾತಾ ಇದರ ಮಾತೃ ಸಂಸ್ಥೆ ವಿದ್ಯಾಮಾತಾ ಫೌಂಡೇಶನ್ ಈಗಾಗಲೇ 3 ರಾಜ್ಯಮಟ್ಟದ ಉದ್ಯೋಗ ಮೇಳ, ಸುಮಾರು 500ಕ್ಕೂ ಹೆಚ್ಚು ನೇರ ಉದ್ಯೋಗ ಸಂದರ್ಶನಗಳ ಮೂಲಕ 5000ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವಲ್ಲಿ ಸಫಲತೆ ಕಂಡಿದೆ.
ಕರಾವಳಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ತರಬೇತಿ ನೀಡಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲೂ ವಿದ್ಯಾರ್ಥಿಗಳ ಪ್ರಯತ್ನದ ಜೊತೆಗೆ ಸಂಸ್ಥೆಯ ಶ್ರಮವೂ ಇದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.