ಮುಕ್ವೆ: ನರಿಮೊಗರು ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಸ್ವಚ್ಛತಾ ಹಿ ಸೇವಾ, ಸ್ವಚ್ಛತೆಯೇ ಸೇವೆ ಅಭಿಯಾನ -2023ರಲ್ಲಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನೆರವೇರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರಿಣಿ ಪಂಜಳ, ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣರಾಜ ಜೈನ್, ಸಲೀಂ ಮಾಯಂಗಳ, ಸೌಮ್ಯ ರಮೇಶ್, ಗ್ರಾಮ ಪಂಚಾಯಿತಿ ನಿಕಟ ಪೂರ್ವ ಉಪಾಧ್ಯಕ್ಷ ಸುಧಾಕರ ಕುಲಾಲ್, ಸದಸ್ಯರಾದ ಪುಷ್ಪಾವತಿ, ಗಣೇಶ್, ಜಯಲಕ್ಷ್ಮಿ, ಆಶಾ ಕಾರ್ಯಕರ್ತೆ ವಾಣಿ, ಸ್ವಚ್ಛತಾ ಸಿಬ್ಬಂದಿಗಳಾದ ಸುಜಾತಾ, ನಮಿತಾ, ಶಾಲಾ ಶಿಕ್ಷಕರಾದ ಸುಮನ, ಜೋಸ್ಲಿನ್ ಪಸನ್ಹ, ಸುರೇಖಾ, ಮಂಜುಳಾ, ಸ್ನೇಹಲತಾ, ದಿವ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನರಿಮೊಗರು ಗ್ರಾಪಂ ಪಿ.ಡಿ.ಒ. ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಘಟನೆ, ವಿದ್ಯಾರ್ಥಿಗಳ ಭಾಗವಹಿಸುವಿಕೆ, ಶಾಲಾ ಸ್ವಚ್ಛ, ಸುಂದರ ಪರಿಸರ, ಶಾಲಾ ಅಸೆಂಬ್ಲಿ, ವಿದ್ಯಾರ್ಥಿಗಳ ವಾರ್ತಾ ವಾಚನದ ಕುರಿತು ಮೆಚ್ಚುಗೆ ವ್ಯಕ್ತವಾಯಿತು. ಶಾಲಾ ಮುಖ್ಯಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು.