ಸವಣೂರು: ಸರ್ವೆಯಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ರೈಲ್ವೇ ಅಧಿಕಾರಿಗಳಿದ್ದ ಬೊಲೆರೋ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಸೆ.27ರಂದು ನಡೆದಿದೆ.

ಅಪಘಾತದಿಂದ ದ್ವಿಚಕ್ರ ವಾಹನ ಜಖಂಗೊಂಡಿದ್ದು, ದ್ವಿಚಕ್ರ ವಾಹನ ಸವಾರನಿಗೆ ಗಾಯವಾಗಿದ್ದು, ರಿಕ್ಷಾ ಚಾಲಕ ಅವಿನಾಶ್ ಎಂಬವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಪರಾರಿಯಾದ ಬೊಲೆರೋ ವಾಹನವನ್ನು ಪತ್ತೆ ಮಾಡುವ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರು ಕಾರ್ಯಾಚರಣೆ ನಡೆಸಿ ಸರ್ವೆ ಗೌರಿ ಹೊಳೆಯ ಪಕ್ಕದಲ್ಲಿ ರೈಲ್ವೇ ನಿಲ್ದಾಣಕ್ಕೆ ಹೋಗುವ ಕಾಲುದಾರಿಯಲ್ಲಿ ಮರಗಳ ನಡುವೆ ವಾಹನವನ್ನು ಪತ್ತೆ ಮಾಡಿದ್ದಾರೆ.