ಭಾರತೀಯರ ಸಂಶೋಧನೆ ಜಗತ್ತಿನ ಹಿತಕ್ಕಾಗಿ : ವಿಶ್ವ ಫಾರ್ಮಸಿಸ್ಟ್ ದಿನ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ್ ಭಟ್ ಕಲ್ಲಡ್ಕ

ಪುತ್ತೂರು: ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಬಹಳ ಮಹತ್ವವಿದೆ. ಕುತೂಹಲ ಯಾವಾಗ ಮೂಡುತ್ತದೆಯೋ ಅಲ್ಲಿ ಸಂಶೋಧನೆಗೆ ಮುಂದಾಗುತ್ತಾರೆ. ನಮ್ಮಲ್ಲಿ ಕುತೂಹಲ, ಆಸಕ್ತಿ, ಹಂಬಲ ಇದ್ದಾಗ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ. ಇದರಿಂದ ವಿದ್ಯಾರ್ಥಿಗಳು ಬೆಳೆಯುತ್ತಾ ಸಮಾಜವನ್ನು ಬೆಳೆಸಿ ಅದರೊಂದಿಗೆ ದೇಶವು ಬೆಳೆಯುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಚಿಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಪುತ್ತೂರು ವಿವೇಕಾನಂದ ಇನ್ ಸ್ಟಿಟ್ಯೂಟ್ ಆಪ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ನಲ್ಲಿ ನಡೆದ ಮಾಹಿತಿಕಾರ್ಯಾಗಾರ ಮತ್ತು ವಿಶ್ವ ಫಾರ್ಮಸಿಸ್ಟ್ ದಿನದ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಮಾತನಾಡಿ, ಫಾರ್ಮಸಿ ಕ್ಷೇತ್ರದಲ್ಲಿ ಸಂಶೋಧನೆಗೆ ಬಹು ಬೇಡಿಕೆ ಇದೆ. ಪ್ರಧಾನ ಮಂತ್ರಿ  ಆರಂಭಿಸಿದ ಆಯುಷ್ಮಾನ್ ಭವ ಕಾರ್ಯಕ್ರಮ ಬಹಳಷ್ಟು ಅಂಶಗಳನ್ನು ಒಳಗೊಂಡಿದೆ. ಅದರಲ್ಲಿ ಒಂದು ಅಂಗದಾನದ ಪರಿಕಲ್ಪನೆ. ಈ ಬಾರಿಯ ವಿಶ್ವ ಫಾರ್ಮಸಿಸ್ಟ್ ದಿನದ ಧ್ಯೇಯ ಅಂಗದಾನ ಮಹಾದಾನವಾಗಿದೆ ಎಂದರು.



































 
 

ಅತಿಥಿಗಳು ಭಾರತಮಾತೆ ಮತ್ತು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಪುತ್ತೂರು ಡ್ರಗ್ಗಿಸ್ಟ್ ಮತ್ತು ಕೆಮಿಸ್ಟ್ ಅಸೋಸಿಯೇಷನ್ ಅಧ್ಯಕ್ಷ, ಹಿರಿಯ ಫಾರ್ಮಸಿಸ್ಟ್ ಪಿ. ವಸುದೇವ ಭಟ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಗೋಪಿನಾಥ್ ಶೆಟ್ಟಿ, ಖಜಾಂಜಿ ಮೂಲಚಂದ್ರ, ಸದಸ್ಯರಾದ ಡಾ. ಅಖಿಲೇಶ್ ಪಾಣಾಜೆ, ಯಶೋಧರ, ಶ್ರೀ ರಾಮ್ ಉಪಸ್ಥಿತರಿದ್ದರು.

ಸಂಸ್ಥೆಯ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ಸ್ವಾಗತಿಸಿ,  ಪ್ರಾಂಶುಪಾಲ ಡಾ. ಗುರುರಾಜ ಎಂ.ಪಿ ವಂದಿಸಿದರು. ಉಪನ್ಯಾಸಕಿ ಪೂರ್ಣಿಮಾ ಕೆ.ಎನ್ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top