ಸವಣೂರು: ಬೆಳಂದೂರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ನಿಧಿ ಸಂಚಯನ ಕಾರ್ಯದ ಪೂರ್ವಭಾವಿ ಸಭೆ ಮಂಗಳವಾರ ಮದ್ಯಾಹ್ನ ನಡೆಯಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದೇ ಒಂದು ಧಾರ್ಮಿಕ ಕ್ಷೇತ್ರ ಚೈತನ್ಯ ಪಡೆಯಬೇಕಾದರೆ ಶ್ರದ್ಧಾ ಭಕ್ತಿಯಿಂದ ತನ್ನನ್ನು ತಾನು ಸಮರ್ಪಿಸಿಕೊಳ್ಳಬೇಕು. ಆಗ ಕ್ಷೇತ್ರದ ಅಭಿವೃದ್ಧಿ ಜತೆ ನಾವೂ ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಅಂಗಾರ, ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಉಪಸ್ಥಿತರಿದ್ದರು. ಕುದ್ಮಾರು, ಕಾಯಿಮಣ, ಬೆಳಂದೂರು, ಸವಣೂರು, ಪುಚಪ್ಪಾಡಿ, ಪಾಲ್ತಾಡಿ, ಕಾಣಿಯೂರು, ಚಾರ್ವಾಕ, ದೊಳ್ಪಾಡಿ ಗ್ರಾಮದ ಪ್ರಮುಖ ದೇವಸ್ಥಾನ, ಭಜನಾ ಮಂಡಳಿ, ಧರ್ಮಸ್ಥಳ ಒಕ್ಕೂಟ ,ಧರ್ಮಸ್ಥಳ ಸ್ವ-ಸಹಾಯ ಸಂಘಗಳು, ಒಡಿಯೂರು ಸ್ವಸಹಾಯ ಸಂಘಗಳು, ನವೋದಯ ಸ್ವಸಹಾಯ ಸಂಘಗಳು, ಸಂಜೀವಿನಿ ಒಕ್ಕೂಟ, ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು, ಬೈಲುವಾರು ಸಂಚಾಲಕರು ಹಾಗೂ ಮೇಲಿನ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.