ಪುತ್ತೂರು: ಅಯೋಧ್ಯೆಯ ರಾಮಜನ್ಮ ಭೂಮಿ ಟ್ರಸ್ಟ್ ಸಮಿತಿಯ ಸದಸ್ಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜೀಯವರ 36ನೇ ಚಾತುರ್ಮಾಸ್ಯ ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಜರಗುತಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರು ಮೈಸೂರಿನ ಬಿ ಬಿ ಕೇರಿಗೆ ಸೌಹಾರ್ದ ಭೇಟಿ ನೀಡಿದರು. ಸ್ವಾಮೀಜಿ ಜೊತೆ ಅರುಣ್ ಪುತ್ತಿಲ ಅವರು ಜೊತೆಗಿದ್ದರು.
ಕಾಲೊನಿಯಲ್ಲಿ ಸ್ವಾಮೀಜಿ ಪಾದಯಾತ್ರೆ ನಡೆಸಿ, ಅಲ್ಲಿನ ನಿವಾಸಿಗಳ ಮನೆಗಳಿಗೂ ಭೇಟಿ ನೀಡಿದರು. ಅಲ್ಲಿ ದೇವರಪೂಜೆ ಮಾಡಿ, ನಿವಾಸಿಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು ಅವರನ್ನು ಆಶೀರ್ವದಿಸಿದರು.
ಕಾಲೋನಿ ಮಂದಿ ಸ್ವಾಮಿಜೀಯವರಿಗೆ ಪೂರ್ಣಕುಂಭ ಸ್ವಾಗತ ನೀಡಿದರು.