ಪುತ್ತೂರು: ಲೋಕೋಪಯೋಗಿ ಇಲಾಖೆ ವತಿಯಿಂದ ಪುತ್ತೂರು ಉಪ್ಪಿನಂಗಡಿ-ರಸ್ತೆ ಮಧ್ಯೆ ಡಿವೈಡರ್‌ಗಳಲ್ಲಿ ಕ್ರಾಟನ್ ಗಿಡಗಳನ್ನು ನೆಡುವ ಕಾರ್ಯಕ್ಕೆ ಶಾಸಕ ಅಶೋಕ್ ರೈ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಪುತ್ತೂರಿನಿಂದ ಉಪ್ಪಿನಂಗಡಿ ತನಕ ರಸ್ತೆ ಮಧ್ಯೆ ಡಿವೈಡರ್ ಇರುವಲ್ಲಿ ಉಜ್ಜೈನಿ ಕ್ರಾಟನ್ ಗಿಡಗಳನ್ನು ನೆಡಲಾಗುವುದು. ರಸ್ತೆ ಮಧ್ಯೆ ಈ ಗಿಡಗಳು ಸೊಂಪಾಗಿ ಬೆಳೆದಲ್ಲಿ ರಸ್ತೆ ಸೌಂದರ್ಯ ವೃದ್ದಿಯಗುತ್ತದೆ ಮತ್ತು ಸ್ವಚ್ಚತೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ರಸ್ತೆಗೆ ಹೊಸ ಮೆರುಗು :
ರಸ್ತೆ ಬದಿಗಳಲ್ಲಿ ಕಾಟು ಮಾವಿನ ಗಿಡಗಳನ್ನು ನೆಡುವ ಮೂಲಕ ಸುದ್ದಿಯಾಗಿದ್ದ ಶಾಸಕರು ಇದೀಗ ರಸ್ತೆ ಡಿವೈಡರ್‌ಗಳಲ್ಲಿ ಕ್ರಾಟನ್ ಗಿಡಗಳನ್ನು ನೆಡುವ ಮೂಲಕ ಪುತ್ತೂರು ನಗರ ಪ್ರವೇಶಿಸುವ ರಸ್ತೆಗೆ ಹೊಸ ಮೆರುಗನ್ನು ನೀಡುವ ಕೆಲಸವನ್ನು ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಅಭಿಯಂತರ ರಾಜಾರಾಂ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು.