ಪುತ್ತೂರು: ಶ್ರೀ ದೇವತಾ ಸಮಿತಿ ವತಿಯಿಂದ ಕಿಲ್ಲೇ ಮೈದಾನದಲ್ಲಿ ಆರು ದಿನಗಳಿಂದ ನಡೆಯುತ್ತಿರುವ ಶ್ರೀ ಗಣೇಶೋತ್ಸವದ ಕಾರ್ಯಕ್ರಮದ ಅಂಗವಾಗಿ ಭಾನುವಾರ ಮಧ್ಯಾಹ್ನ ಮೂಡಪ್ಪ ಸೇವೆ ನಡೆಯಿತು.
ಬೆಳಿಗ್ಗೆ ಭಜನಾ ಕಾರ್ಯಕ್ರಮ ನಡೆದು ಮಧ್ಯಾಹ್ನ 12ಕ್ಕೆ ಮೂಡಪ್ಪ ಸೇವೆ ನಡೆಯಿತು. ಬಳಿಕ ಸುಗಮ ಸಂಗೀತ, ಯಕ್ಷಗಾನ ತಾಳಮದ್ದಳೆ ನಡೆಯಿತು. ಮಹಾಪೂಜೆ ಬಳಿಕ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿ ಕಾರ್ಯದರ್ಶಿ ರಮೇಶ್, ಕೋಶಾಧಿಕಾರಿ ಸಿ.ಶ್ರೀಧರ ನಾಯಕ್, ಸದಸ್ಯರಾದ ದಿನೇಶ್ ಕುಲಾಲ್ ಪಿ.ವಿ., ಗಣೇಶ್ ಶೆಟ್ಟಿ, ರತ್ನಾಕರ ಆಚಾರ್ಯ, ಕಿಟ್ಟಣ್ಣ ಗೌಡ, ವಸಂತ ನಾಯಕ್, ಸುದೇಶ್ ಕುಮಾರ್, ಸುದರ್ಶನ್ ಶೆಟ್ಟಿ, ಗಣಪತಿ ಪೈ ಭಕ್ತಾದಿಗಳು ಉಪಸ್ಥಿತರಿದ್ದರು.
ನಾಳೆ ಶೋಭಾಯಾತ್ರೆಯೊಂದಿಗೆ ಸಂಪನ್ನ:
ಕಳೆದ ಏಳು ದಿನಗಳಿಂದ ಕಿಲ್ಲೇ ಮೈದಾನದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಶೋಭಾಯಾತ್ರೆಯೊಂದಿಗೆ ಸೋಮವಾರ ಸಂಪನ್ನಗೊಳ್ಳಲಿದೆ.
ನಾಳೆ ಮಧ್ಯಾಹ್ನ ಮಹಾಪೂಜೆ ಬಳಿಕ 1 ಗಂಟೆಗೆ ಶ್ರೀ ಗಣೇಶ ದೇವರ ಮೂರ್ತಿಯ ಬಲಿ ಉತ್ಸವ ಜರಗಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6 ಗಂಟೆಗೆ ಶ್ರೀ ರಕ್ತೇಶ್ವರಿ ನೇಮೋತ್ಸವ, ಪಂಜುರ್ಲಿ ದೈವದ ಭೂತಕೋಲ ನಡೆಯಲಿದೆ. ರಾತ್ರಿ 7ಕ್ಕೆ ಸುಡುಮದ್ದು ಪ್ರದರ್ಶನ ನಡೆದು ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು.
ಶೋಭಾಯಾತ್ರೆ ಕೋರ್ಟ್ ರಸ್ತೆಯಿಂದ ಹೊರಟು ಮುಖ್ಯರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಆಫೀಸ್ ರಸ್ತೆ, ರಾಧಾಕೃಷ್ಣ ಮಂದಿರ, ಬೊಳುವಾರು ಸಾಗಿ ಮಂಜಲ್ಪಡ್ಪು ಕೆರೆಯಲ್ಲಿ ಶ್ರೀ ಗಣೇಶನ ವಿಗ್ರಹ ಜಲಸ್ತಂಭನಗೊಳ್ಳಲಿದೆ.