ಪರಪ್ಪನ ಅಗ್ರಹಾರ ಸೇರಿದ ಚೈತ್ರಾ ಕುಂದಾಪುರ!!

ಬೆಂಗಳೂರು: 5 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಹಾಗೂ ಆಕೆಯ ಗ್ಯಾಂಗ್ ನ ಇತರೆ ಐವರು ಆರೋಪಿಗಳ ಸಿಸಿಬಿ ಕಸ್ಟಡಿ ಶನಿವಾರಕ್ಕೆ ಅಂತ್ಯಗೊಂ ಡಕಾರಣ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಅದರಂತೆ ಚೈತ್ರಾ ಕುಂದಾಪುರ ಸೇರಿದಂತೆ ಇತರೆ 6 ಮಂದಿ ಆರೋಪಿಗಳಿಗೆ ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.

ಈ ವೇಳೆ ವಕೀಲರ ಬದಲಾವಣೆಗೆ ಚೈತ್ರಾ ಮನವಿ ಮಾಡಿಕೊಂಡರು. ಅಲ್ಲದೇ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದರು. ಅಕ್ಟೋಬರ್ 6ರವರೆಗೆ ಚೈತ್ರಾ ಸೇರಿದಂತೆ 7 ಜನರು ಪರಪ್ಪನ ಅಗ್ರಹಾರದಲ್ಲಿ ಇರಲಿದ್ದಾರೆ.

ಇನ್ನು ಆರೋಪಿಗಳಾದ ರಮೇಶ್, ಚನ್ನನಾಯಕ್ ಮತ್ತು ಧನರಾಜ್ ಅವರಿಂದ ಜಾಮೀನು ‌ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲಿ ಎಂದು 3ನೇ ಎಸಿಎಂಎಂ ಕೋರ್ಟ್​ ಪ್ರಾಸಿಕ್ಯೂಟರ್ ಗೆ ಸೂಚನೆ ನೀಡಿದೆ. ಜೊತೆಗೆ ಸೆ.26ಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top