ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶ್ರೀ ಗಣೇಶೋತ್ಸವ ಜಲಸ್ತಂಭನದೊಂದಿಗೆ ಸಂಪನ್ನ| ಜನಮನ ಸೂರೆಗೊಂಡ ಆಕರ್ಷಕ ಸ್ತಬ್ಧಚಿತ್ರ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಾಲ್ಕು ದಿನಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಶುಕ್ರವಾರ ರಾತ್ರಿ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.

ಶುಕ್ರವಾರ ಸಂಜೆ ಶ್ರೀ ಮಹಾಗಣಪತಿಗೆ ಮಹಾಪೂಜೆ ಬಳಿಕ ದೇವಸ್ಥಾನದ ವಠಾರದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಗುರು ತಂತ್ರಿ ಶ್ರೀ ಗಣೇಶನಿಗೆ ಮಂಗಳಾರತಿ ಬೆಳಗಿ, ತೆಂಗಿನ ಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಿದರು.

ಬಳಿಕ ವೇದಿಕೆ ಬಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಸೇರಿದಂತೆ ಸಮಿತಿ ಪದಾಧಿಕಾರಿಗಳು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಮೂಷಿಕ ವಾಹನದಲ್ಲಿ ದಯಾನಂದ ಚಾಲಕರಾಗಿ ಸಹಕರಿಸಿದರು.































 
 

ಈ ಸಂದರ್ಭದಲ್ಲಿ ಗಣೇಶನ ವಿಗ್ರಹ ರಚನೆ ಮಾಡಿದ ಶ್ರೀನಿವಾಸ್ ಪೈ,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ಜಿಲ್ಲಾ ಧಾರ್ಮಿಕ ಪರಿಷತ್ ನಿಕಟಪೂರ್ವ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಶ್ರೀನಿವಾಸ್, ಜತೆಕಾರ್‍ಯದರ್ಶಿ ನೀಲಂತ ಕುಮಾರ್, ಉಪಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಸಹಜ್ ರೈ ಬಳಜ್ಜ, ವಿಶ್ವನಾಥ ಗೌಡ ಬನ್ನೂರು, ಸುಧೀರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರಮೇಶ್ ಮುಂಡೂರು ಮತ್ತು ಶೇಖರ್ ಬ್ರಹ್ಮನಗರ, ಗೌರವ ಸಲಹೆಗಾರರಾದ ಸಂತೋಷ್ ರೈ ಕೈಕಾರ, ಭಾಮಿ ಜಗದೀಶ್ ಶೆಣೈ, ಚಂದ್ರಶೇಖರ್ ಪರ್ಲಡ್ಕ, ಚಂದ್ರಶೇಖರ ರಾವ್ ಬಪ್ಪಳಿಗೆ, ಮಲ್ಲೇಶ್ ಆಚಾರ್ಯ, ರಾಜೇಶ್ ಬನ್ನೂರು, ಸುರೇಂದ್ರ ಆಚಾರ್ಯ, ಅಜಿತ್ ರೈ ಹೊಸಮನೆ, ಕಿರಣ್‌ಶಂಕರ್ ಮಲ್ಯ, ಆನಂದ ನೆಕ್ಕರೆ, ಚಂದ್ರಶೇಖರ್ ಎಸ್, ಉದಯ ಹೆಚ್, ಶ್ರೀಧರ್ ಪಟ್ಲ, ದಿನೇಶ್ ಪಂಜಿಗ, ರೂಪೇಶ್ ಕೊಂಬೆಟ್ಟು, ಶೇಖರ್ ಬನ್ನೂರು, ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ, ವಾಟೆಡ್ಕ ಶ್ರೀಕೃಷ್ಣ ಭಟ್, ಜಯಶ್ರೀ ಎಸ್ ಶೆಟ್ಟಿ, ಸದಸ್ಯರಾದ ಗೋಪಾಲ್ ನಾಯ್ಕ, ಚಂದ್ರಶೇಖರ್ ಪಿ, ಗೋಪಾಲ ನಾಕ್, ಸಚಿನ್ ಶೆಣೈ, ರಂಜಿತ್ ಮಲ್ಲಾ, ಕರುಣಾಕರ್ ಶೆಟ್ಟಿ, ಉದಯ ಆದರ್ಶ, ನಾರಾಯಣ ಆದರ್ಶ, ನಿತಿನ್ ಆದರ್ಶ, ಚಂದ್ರ ಸಿಂಗ್, ಶ್ರೀಕಾಂತ್, ಅಶೋಕ್ ಬ್ರಹ್ಮನಗರ, ಪವನ್ ಕುಮಾರ್, ವಿಶ್ವನಾಥ ಕುಲಾಲ್, ನ್ಯಾಯವಾದಿ ಮಾಧವ ಪೂಜಾರಿ, ಜಯಂತಿ ನಾಯಕ್, ಸ್ಯಾಕ್ಸೋಫೋನ್ ಕಲಾವಿದ ಡಾ|ಪಿ.ಕೆ.ಗಣೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಬೆಳ್ಳಿಪ್ಪಾಡಿ, ಯುವರಾಜ್ ಪೆರಿಯತ್ತೋಡಿ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಗಣೇಶನ ವಿಗ್ರಹವನ್ನು ಸಹಿತ ವಿವಿಧ ಆಕರ್ಷಕ ಸ್ತಬ್ಧಚಿತ್ರಗಳಾದ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ನೃತ್ಯ, ಚೆಂಡೆ ನೃತ್ಯ, ವಯೋಲಿನ್ ಸಂಗೀತ, ನೃತ್ಯ ಭಜನೆ, ನಾಸಿಕ್ ಬ್ಯಾಂಡ್, ಯುವಕರ ನೃತ್ಯ ಶೋಭಾಯಾತ್ರೆಗೆ ಹೆಚ್ಚಿನ ಮೆರುಗು ನೀಡಿತ್ತು ಶೋಭಾಯಾತ್ರೆ  ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಕೆರೆಯಲ್ಲಿ ಶ್ರೀ ಗಣೇಶನ ವಿಗ್ರಹ ಜಲಸ್ತಂಭನಗೊಳ್ಳುವ ಮೂಲಕ ಸಂಪನ್ನಗೊಂಡಿತು.

ಜನಮನ ರಂಜಿಸಿದ ಆಕರ್ಷಕ ಸ್ತಬ್ಧಚಿತ್ರಗಳು :

ಕಟೀಲು ಶ್ರೀ ದುರ್ಗಾಪರಮೇಶ್ವರಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕ ಡಾ|ಕೇಶವ ಬಲಿರಾಮ್ ಹೆಡ್ಗೇವಾರ್ ಮತ್ತು ಗುರೂಜಿ ಎಂದೇ ಕರೆಯಲ್ಪಡುವ ಮಾಧವರಾವ್ ಸದಾಶಿವರಾವ್ ಗೋಳ್ವಾಲ್ಕರ್ ಅವರ ಭಾವಚಿತ್ರ, ನಾಸಿಕ್ ಬ್ಯಾಂಡ್, ಲೈವ್ ವಯೋಲಿನ್ ಸಂಗೀತದೊಂದಿಗೆ ಯುವಕ, ಯವತಿಯರ ಚೆಂಡೆ ಕುಣಿತ, ಸಚಿನ್ ಕುಮಾರ್ ಶ್ರದ್ಧಾಂಜಲಿ ಚಿತ್ರ,  ವಾಸುದೇವ ಶ್ರೀಕೃಷ್ಣನನ್ನು ಹೊತ್ತ ಸ್ತಬ್ಧಚಿತ್ರ, ವಿ ಶೌರ್ಯ ಜಾಗೃತಿ ರಥ, ಗಣಪತಿ ಸ್ತಬ್ಧಚಿತ್ರ, ಶಿವಪಾರ್ವತಿ ಅಭಿನಯ, ಬಾಲಗಂಗಾಧರ ತಿಲಕರ ಚಿತ್ರ ಮತ್ತು ವಜ್ರಾಯುಧ ಚಿತ್ರ, ಚಂದ್ರಯಾನ ವಿಕ್ರಂ ಲ್ಯಾಂಡರ್,  ಶಿವಲಿಂಗ ಪೂಜೆ, ನ ತೆಂಗಿನ ಕಾಯಿಯೊಳಗಿನಿಂದ ಹೊರ ಬಂದ ಗಣಪ, ಮೂಶಿಕ ವಾಹನದಲ್ಲಿ ಶ್ರೀ ಗಣೇಶ, ಸಂಗೀತ ನೃತ್ಯ, ದತ್ತ ಯಜ್ಞ ಚಿತ್ರ, ಕಾಂತಾರ ಚಿತ್ರದರ್ಶನ `ದೈವಲೀಲೆ’ ಜನಮನ ಸೂರೆಗೊಂಡಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top