ಬೆಂಗಳೂರು – ಮಂಗಳೂರು ರೈಲು ಮುರುಡೇಶ್ವರದವರೆಗೆ ವಿಸ್ತರಣೆ | ಮಂಗಳೂರು – ಕುಂದಾಪುರ ಪ್ರಯಾಣಕ್ಕೆ ಇನ್ನು ಎರಡೇ ಗಂಟೆ ಸಾಕು!!

ಮಂಗಳೂರು: ಬೆಂಗಳೂರು ಮೈಸೂರು ಮಂಗಳೂರಿಗೆ ಬರುತ್ತಿದ್ದ ನಿತ್ಯ ರೈಲನ್ನು ಮುರ್ಡೇಶ್ವರದ ವರೆಗೆ ವಿಸ್ತರಿಸಿದ್ದು, ವೇಳಾಪಟ್ಟಿಯಲ್ಲಿರುವ ವ್ಯತ್ಯಯ ಮತ್ತು ತಡವಾಗಿ ಪ್ರಯಾಣದ ಹಿನ್ನೆಲೆಯಲ್ಲಿ ಇದೀಗ ರೈಲ್ವೇ ಇಲಾಖೆ ಕ್ರಮ ಕೈಗೊಂಡಿದೆ.

ಆರಂಭದಲ್ಲಿ ವರದಿಗೆ ಸ್ಪಂದಿಸಿದ ಮೈಸೂರು ಸಂಸದ ರೈಲ್ವೇ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದರು. ತಕ್ಷಣ ಸ್ಪಂದಿಸಿದ ರೈಲು ಸಚಿವರು ಕೆಲವೇ ಗಂಟೆಗಳಲ್ಲಿ ರೈಲ್ವೆ ಬೋರ್ಡ್ ನಿಂದ ದಕ್ಷಿಣ ರೈಲ್ವೆಗೆ ಮಂಗಳೂರು ಮತ್ತು ಸುರತ್ಕಲ್ ನಡುವಿನ ಪ್ರಯಾಣವನ್ನು ತಗ್ಗಿಸಲು ಆದೇಶ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ಗಳು ಜಂಟಿಯಾಗಿ ವೇಳಾಪಟ್ಟಿ ಸರಿಪಡಿಸುವತ್ತ ಕಾರ್ಯನಿರತರಾಗಿದ್ದಾರೆ.

ಬೆಂಗಳೂರು ಮೈಸೂರು ಮುರ್ಡೇಶ್ವರ ನಿತ್ಯ ರೈಲಿನ ವೇಳಾಪಟ್ಟಿಯ ಸಮಸ್ಯೆಗಳ ಬಗ್ಗೆ ರೈಲ್ವೇ ಇಲಾಖೆಯ ಗಮನ ಸೆಳೆಯಲಾಗಿತ್ತು. ಮಂಗಳೂರಿನಿಂದ ಕುಂದಾಪುರಕ್ಕೆ ಈ ರೈಲು ವೇಳಾಪಟ್ಟಿಯ ಪ್ರಕಾರ ಬರೋಬ್ಬರಿ ನಾಲ್ಕು ಗಂಟೆಯ ಪ್ರಯಾಣವಾಗುತ್ತಿತ್ತು. ಮಂಗಳೂರಿನಿಂದ ಸುರತ್ಕಲ್ ಗೆ ಪ್ರಯಾಣದ ಸಮಯದಲ್ಲಿ ರೈಲ್ವೇ ಇಲಾಖೆ ಕೇರಳದ ಲಾಬಿಗೆ ಮಣಿದಿರುವ ಶಂಕೆಯೂ ವ್ಯಕ್ತವಾಗಿತ್ತು. ಇದೀಗ ಎರಡು ಗಂಟೆ ಅವಧಿಯಲ್ಲಿ ಮಂಗಳೂರಿನಿಂದ ಕುಂದಾಪುರಕ್ಕೆ ರೈಲು ಪ್ರಯಾಣಿಸಲಿದೆ ಎಂದು ತಿಳಿದು ಬಂದಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top