ಪುತ್ತೂರು : ಪುತ್ತೂರು ವಿಜಯ ಸಾಮ್ರಾಟ್ ಆಶ್ರಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ‘ಪುತ್ತೂರುದ ಪಿಲಿಗೊಬ್ಬು’ ಕಾರ್ಯಕ್ರಮ ಅ. 22ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ.
ದ.ಕ ಜಿಲ್ಲೆಯ ಆಹ್ವಾನಿತ ಹತ್ತು ತಂಡಗಳ ಪಿಲಿಗೊಬ್ಬು ಸ್ಪರ್ಧೆ ಇದಾಗಿದ್ದು, ಈ ಕುರಿತು ಪೂರ್ವಭಾವಿಯಾಗಿ ದರ್ಬೆ ಶ್ರೀರಾಮ ಸೌಧದಲ್ಲಿ ಸಮಿತಿಯನ್ನು ರಚಿಸಲಾಯಿತು.
ಸಮಿತಿ ಅಧ್ಯಕ್ಷರಾಗಿ ಶ್ರೀರಾಮ ಸೌಧದ ಮಾಲಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕಾರ್ಯಾಧ್ಯಕ್ಷರಾಗಿ ಸುಜಿತ್ ರೈ ಪಾಲ್ತಾಡ್ ಸಂಚಾಲಕರಾಗಿ ನಾಗರಾಜ್ ನಡುವಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷರುಗಳಾಗಿ ಸಂದೀಪ್ ರೈ ನಂಜೆ, ದೇವಿಪ್ರಕಾಶ್ ಭಂಡಾರಿ, ಕಾರ್ಯದರ್ಶಿಗಳಾಗಿ ಸುರೇಶ್, ಶರತ್ ಕುಮಾರ್ ಮಾಡಾವು, ಜೊತೆ ಕಾರ್ಯದರ್ಶಿಯಾಗಿ ಶಂಕರ್ ಭಟ್ ಈಶಾನ್ಯ, ಕೋಶಾಧಿಕಾರಿಯಾಗಿ ರಾಜೇಶ್ ಕೆ. ಗೌಡ, ಅಶೋಕ್ ಅಡೂರು, ಸಂಘಟನಾ ಕಾರ್ಯದರ್ಶಿಗಳಾಗಿ ಅರುಣ್ ರೈ, ಉದಯ್ ಪಾಟಾಳಿ ಬೆಳ್ಳಾರೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಯಾನಂದ ಶೆಟ್ಟಿ ಉಜೈಮಾ, ಪ್ರೀತಂ ಶೆಟ್ಟಿ ಪೆರ್ನೆ, ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಪ್ರಮೀತ್ ರಾಜ್ ಕಟ್ಟತ್ತಾರು, ವಿನಯ ಕೋರಿಕ್ಕಾರು, ಆನಂದ ತೆಂಕಿಲ, ದಿನೇಶ್ ವಾಸ ಚಂದ್ರಶೇಖರ ರೈ ಸಣಂಗಲ, ಸತೀಶ್ ರೈ ದೇವಿನ, ಕಿಶೋರ್ ಕೊಳ್ತಿಗೆ, ಆದೇಶ್ ಉಪ್ಪಿನಂಗಡಿ, ಸಚಿನ್ ಶೆಟ್ಟಿ ನರಿಮೊಗರು, ಸಾಯಿರಾಂ ಬಾಳಿಲ, ಸುಬ್ಬು ಸಂಟ್ಯಾರ್, ವಸಂತ ಕುಮಾರ್ ಪುತ್ತೂರು, ಸತೀಶ್ ಬಲಮುರಿ, ಪ್ರದೀಪ್ ರೈ ಕರ್ನೂರ್, ಪ್ರಶಾಂತ್ ಸವಣೂರು, ಯಶು ಸಂಪ್ಯ, ಯತೀಶ್ ಕುರಿಯ, ಪುನೀತ್ ಕೆಯ್ಯೂರು, ಹರ್ಷಕುಮಾರ್ ಪುತ್ತೂರು, ಚರಣ್ ರೈ ಮಠ, ಸಚಿನ್ ಸವಣೂರು, ಪವನ್ ಶೆಟ್ಟಿ, ಪ್ರಗತ್ ಶೆಟ್ಟಿ ಆಯ್ಕೆಯಾಗಿದ್ದಾರೆ.