ಬೆಂಗಳೂರು: ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ವೈವಾಹಿಕ ಸಂಬಂಧಕ್ಕೆ ಕುರಿತಾಗಿ ಆಗಮಿಸುವ ತಂಡಕ್ಕೂ ಶ್ರೀ ರಾಮಚಂದ್ರಾಪುರ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.
ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ಕನ್ಯೆಯರ ಜೊತೆಗೆ ವೈವಾಹಿಕ ಸಂಬಂಧ ಏರ್ಪಡಿಸುವ ಉದ್ದೇಶದಿಂದ ಅಧ್ಯಯನಕ್ಕಾಗಿ ತಂಡವೊಂದು ಕರಾವಳಿ ಕರ್ನಾಟಕಕ್ಕೆ ಆಗಮಿಸುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶಕ್ಕೂ ಮಠಕ್ಕೂ ಸಂಬಂಧವಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ – “ಈ ತಂಡದ ಜತೆ ಸಂಪರ್ಕ ಮಾಡಿದವರ ಪೈಕಿ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ಆಪ್ತರಾಗಿರುವವರು ಇದ್ದಾರೆ. ಆದ್ದರಿಂದ ಮೋಸ ಹೋಗಲು ಅವಕಾಶವಿಲ್ಲ” ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಮಠದ ಜತೆ ನೇರ ಸಂಪರ್ಕದಲ್ಲಿ ಇರುವವರು ಯಾರೂ ಕೂಡ ಉತ್ತರ ಭಾರತದ ತಂಡದೊಂದಿಗೆ ತೊಡಗಿಸಿಕೊಂಡಿಲ್ಲ. ಅಲ್ಲದೇ, ಈ ಉದ್ದೇಶಕ್ಕೆ ಮಠದಿಂದ ಯಾರನ್ನೂ ನಿಯೋಜಿಸಿಲ್ಲ ಎಂದು ಮಠದ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.