ಕೊಳ್ತಿಗೆ: ಮೊಗಪ್ಪೆ ಶ್ರೀ ಮುತ್ತು ಮಾರಿಯಮ್ಮ ದೇವಾಲಯದ ಸಮೀಪದಲ್ಲಿ 8ನೇ ವರ್ಷದ ಸೌಹಾರ್ದ ಗಣೇಶೋತ್ಸವ ನಡೆದು, ಶೋಭಾಯಾತ್ರೆಯೊಂದಿಗೆ ಗಣೇಶ ಮೂರ್ತಿ ಜಲಸ್ತಂಭನಗೊಂಡಿತು.
ನಾಸಿಕ್ ಬ್ಯಾಂಡ್ ಸಿಡಿಮದ್ದುಗಳ ಪ್ರದರ್ಶನಗಳೊಂದಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು.

ಶ್ರೀ ಪ್ರದೀಪ್ ಕುಮಾರ್ ಪಾಂಬಾರು ಅವರ ನೇತೃತ್ವದಲ್ಲಿ ಸರ್ವಧರ್ಮಗಳ ಸಹಭಾಗಿತ್ವದಲ್ಲಿ ಗಣೇಶೋತ್ಸವ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಗೀತ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ರವಿ ಪಾಂಬಾರು ಅವರ ಸಾರತ್ಯದಲ್ಲಿ ಆರ್.ಪಿ. ಕ್ರಿಯೇಷನ್ ನೈಟ್ಸ್ 2023 ಅದ್ದೂರಿಯಾಗಿ ನಡೆಯಿತು.
ಆರ್.ಪಿ. ಕ್ರಿಯೇಷನ್ ತಂಡದಿಂದ ವಿವಿಧ ವೇಷಭೂಷಣ ಪ್ರದರ್ಶನಗಳ ತುಳುನಾಡ ವೈಭವ ಹಾಗೂ ಕರಾವಳಿಯ ಖ್ಯಾತ ಗಾಯಕರ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಕಲಾವಿದರಿಂದ ಗಾನ ನೃತ್ಯ ವೈಭವ ನಡೆಯಿತು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೇಯ ಎಂ.ಜಿ. ಸುಳ್ಯ, ವಿಜಿತ್ ಮಂಡೆಕೋಲು, ಗಿರೀಶ್ ನಿಂತಿಕಲ್ಲು, ಸೌಮ್ಯ ಎರ್ಮೆಟ್ಟಿ ಸುಳ್ಯ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮ ನಿರೂಪಣೆಯಲ್ಲಿ ರೋಹಿತ್ ಕುರಿಕ್ಕಾರ್ ಗಾಯಕರಾಗಿ ವಿನಯ್ ಕುಮಾರ್ ಅಡ್ಯನಡ್ಕ, ವಸಂತಿ ಎಣ್ಮುರು, ಶ್ರೀಧರ್ ಎಕ್ಕಡ್ಕ, ಹರೀಶ್ ಪಂಜಿಕಲ್ಲು, ವಿಜಿತ್ ಮಂಡೆಕೋಲು, ಗಾಯತ್ರಿ ಹಾಗೂ ನೃತ್ಯ ಕಲಾವಿದರಾಗಿ ಶ್ರೇಯ ಯಂ.ಜಿ. ಸುಳ್ಯ, ವಿಶ್ಮಿತಾ, ಕಲ್ಪನಾ ಸೌಮ್ಯ, ರಿತೇಶ್. ಮುರಳೀಧರ, ಪ್ರಜ್ವಲ್, ಮೋಹಿತ್, ಮೋಕ್ಷಿತ್, ನಿತಿನ್, ಮೀನಾಕ್ಷಿ, ಧನ್ಯ, ಸಂಧ್ಯಾ, ಹರ್ಷಿತಾ, ಸವಿತಾ, ಅನುಶ್ರೀ, ರಮ್ಯ, ಧನುಸು, ಹರ್ಷಿತ್, ವರ್ಷಿತ್, ಸುರೇಶ .ಸಿ.ಕೆ., ಮಾಸ್ಟರ್ ಸುಳ್ಯ ಸಹಕರಿಸಿದರು.