ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ಗೆ 88 ಲ.ರೂ. ವಂಚಿಸಿದ ಆರೋಪಿ ಮಂಜುನಾಥ್ ಖಾರ್ವಿ ಎಂಬಾತನಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿ ಸಹಕಾರಿ ಮೀನು ಮಾರಾಟ ಫೆಡರೇಷನ್ ಸಂಸ್ಥೆಯಿಂದ ಮೀನು ಖರೀದಿ ಮಾಡಿದ್ದ. ಫೆಡರೇಷನ್‌ಗೆ ಮೀನು ಮಾರಾಟವಾದ ಕಮಿಷನ್ ಕೂಡ ಬಾಕಿ ಇರಿಸಿದ್ದ. ಈ ಮೊತ್ತವನ್ನು ಪಾವತಿಸಲು ನೀಡಿದ್ದ ಮೂರು ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು.
ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಆರೋಪಿ 5 ಲ.ರೂ., 53 ಲ.ರೂ. ಮತ್ತು 30 ಲ.ರೂ. ಸೇರಿದಂತೆ ಒಟ್ಟು 88 ಲ.ರೂ ಪಾವತಿಸಬೇಕು ಎಂದು ಈ ಹಿಂದೆ ತೀರ್ಪು ನೀಡಿತ್ತು. ತೀರ್ಪಿನಂತೆ ಹಣ ಮರುಪಾವತಿ ಮಾಡಲು ವಿಫಲನಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿ ಮಾಡಲಾಗಿತ್ತು.
ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಸೆ. 20ರಂದು ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.