ಜೋಡಣೆ ಕಳಚಿದ ಕಾಂಕ್ರೀಟ್ ಮಿಕ್ಸರ್ ಯಂತ್ರ ಪ್ರಪಾತಕ್ಕೆ..!!

ಪುತ್ತೂರು: ಚಲಿಸುತ್ತಿದ್ದ ವಾಹನದಿಂದ ಕಾಂಕ್ರೀಟ್ ಮಿಕ್ಸರ್ ಯಂತ್ರ ಕಳಚಿ, ಪಕ್ಕದ ಬರೆಯಿಂದ ಕೆಳಗೆ ಉರುಳಿದ ಘಟನೆ ಶುಕ್ರವಾರ ಬೆಳಿಗ್ಗೆ ಬೊಳುವಾರಿನಲ್ಲಿ ನಡೆದಿದೆ.

ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ವಾಹನವೊಂದಕ್ಕೆ ಜೋಡಿಸಿ, ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಕಾಂಕ್ರೀಟ್ ಮಿಕ್ಸರ್ ಯಂತ್ರ ವಾಹನದ ಜೋಡಣೆಯಿಂದ ಕಳಚಿ, ನಿಯಂತ್ರಣ ಕಳೆದುಕೊಂಡಿದೆ. ಈ ಮಿಕ್ಸರ್ ಯಂತ್ರ ಪಕ್ಕದ ಬರೆಯಿಂದ ಕೆಳಗೆ ಉರುಳಿ ಬಿದ್ದಿದೆ.

ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top