ವಿವೇಕಾನಂದ ಕಾಲೇಜಿನ 42 ನೇ ವರ್ಷದ ಗಣೇಶೋತ್ಸವ | ಧಾರ್ಮಿಕ ಚಿಂತನೆ ಬೆಳೆಸುವತ್ತ ನಮ್ಮ ಯೋಚನೆಯಿರಲಿ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಗಣೇಶ ಎಲ್ಲಾ ದೇವತೆಗಳ ಅಧಿದೇವತೆ. ಹಿಂದೂ ಸಮಾಜದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕ್ ಸಾರ್ವಜನಿಕ ಗಣೇಶೋತ್ಸವ ಜಾರಿಗೆ ತಂದರು. ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸುವ ಬಹುದೊಡ್ಡ ಸವಾಲು ನಮ್ಮ ಮುಂದೆ ಇದೆ. ವಿದ್ಯಾರ್ಥಿಗಳ ಯೋಚನೆಯು ಧಾರ್ಮಿಕ ಚಿಂತನೆ ಬೆಳೆಸುವತ್ತ ಇರಬೇಕು. ನಮ್ಮ ದೇಶದ ಮೂಲ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ವಿವೇಕಾನಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿದ್ಯಾಲಯಗಳಿಂದ ಆಚರಿಸಲಾಗುವ 42ನೇ ವರ್ಷದ ಶ್ರೀ ಗಣೇಶೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯಅತಿಥಿಯಾಗಿದ್ದ ಬೆಂಗಳೂರು ಪ್ರಶಾಂತಿ ಆಯುರ್ವೇದಿಕ್ ಸಂಸ್ಥೆಯ ಮುಖ್ಯಸ್ಥ, ಆಯುರ್ವೇದ ವೈದ್ಯ ಡಾ. ಗಿರಿಧರ್ ಕಜೆ ಮಾತನಾಡಿ, ಭಾರತ ನೆಲದ ವೈದ್ಯ ಪದ್ಧತಿ ಆಯುರ್ವೇದ. ಭಾರತ ಯಾವುದೇ ಕಾಯಿಲೆಗಳನ್ನು ಜಗತ್ತಿಗೆ ನೀಡಲಿಲ್ಲ. ಅದಕ್ಕೆ ಪರ್ಯಾಯವಾಗಿ ಆಯುರ್ವೇದವನ್ನು ಜಗತ್ತಿಗೆ ನೀಡಿದೆ. ಔಷಧೀಯ ಸಸ್ಯಗಳಿಗೆ ಅದ್ಭುತವಾದ ಶಕ್ತಿ ಇದೆ. ಭಾರತದ ಹಳ್ಳಿ ಹಳ್ಳಿಗಳಲ್ಲಿ ಮನೆ ಮದ್ದು ಇದೆ. ನಮ್ಮ ದೇಶದಲ್ಲಿ ಅದು ಶ್ರೀಮಂತವಾಗಿದೆ. ಭಾರತೀಯರು ಪರಿಸರದ ಜೊತೆ ಬದುಕುವವರು ಹಾಗೂ ಬೆಳೆಯುವವರು. ನಮ್ಮ ಭಾರತದ ಶ್ರೇಷ್ಠತೆಯಾದ ಆಯುರ್ವೇದವನ್ನು ಬೆಳೆಸಿ ಪೋಷಿಸೋಣ ಎಂದು ಹೇಳಿದರು.



































 
 

ಈ ಸಂದರ್ಭದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ವಿಕಸನದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಗಣೇಶೋತ್ಸವದ ಸಲುವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಕುಮಾರ ಸ್ವಾಗತಿಸಿ, ಸಮಿತಿ ಕಾರ್ಯದರ್ಶಿ, ಪ್ರಾಧ್ಯಾಪಕ ಪ್ರೊ. ಪ್ರಶಾಂತ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.    

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top