ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಮಹತ್ವಾಕಾಂಕ್ಷಿ ಯೋಜನೆಯಾದ ಕಣ್ಣಿನ ಆಸ್ಪತ್ರೆ ಸೆ. 21ರಂದು ಸೇವೆಗೆ ತೆರೆದುಕೊಂಡಿತು.
ರೋಟರಿ ಜಿ.ಎಲ್. ಸಭಾಭವನ ಆವರಣದ ರಾಧಾಕೃಷ್ಣ ಬಿಲ್ಡಿಂಗಿನಲ್ಲಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ನಿರ್ಮಿಸಲಾಗಿದೆ. ಪ್ರಸಾದ್ ನೇತ್ರಾಲಯದ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.
ಬಳಿಕ ಆಸ್ಪತ್ರೆಗೆ ಆಗಮಿಸಿ ಪಿಡಿಜಿ ಡಾ. ಭಾಸ್ಕರ್ ಎಸ್. ಅವರು ನೇತ್ರಾಲಯವನ್ನು ಉದ್ಘಾಟಿಸಿದರು. ಪ್ರಸಾದ್ ನೇತ್ರಾಲಯದ ವೈದ್ಯ ಡಾ. ಕೃಷ್ಣಪ್ರಸಾದ್ ಕೂಡ್ಲು, ಬಲರಾಮ ಆಚಾರ್ಯ, ಡಾ. ಶ್ಯಾಮ್, ಪಿ.ಡಿ. ಕೃಷ್ಣ ಕುಮಾರ್ ರೈ, ವಾಮನ್ ಪೈ, ಸಂಕಪ್ಪ ರೈ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಜಯ್’ರಾಜ್ ಭಂಡಾರಿ, ಕಾರ್ಯದರ್ಶಿ ಸುಜಿತ್ ಡಿ. ರೈ, ನಿಕಟಪೂರ್ವ ಅಧ್ಯಕ್ಷ ಉಮನಾಥ್ ಪಿ.ಬಿ., ನಿಕಟಪೂರ್ವ ಕಾರ್ಯದರ್ಶಿ ಡಾ. ಶ್ರೀಪ್ರಕಾಶ್, ನಿಯೋಜಿತ ಅಧ್ಯಕ್ಷ ಡಾ. ಶ್ರೀಪತಿ, ಸದಸ್ಯರಾದ ಸತೀಶ್, ಡಿ.ಆರ್.ಎಫ್.ಸಿ. ಡಾ. ಸೂರ್ಯನಾರಾಯಣ, ಎ.ಜೆ. ರೈ, ಸೋಮಶೇಖರ ರೈ, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಸಭಾಪತಿ ಪ್ರೇಮಾನಂದ್, ರೋಟರಿ ಸದಸ್ಯರು ಹಾಗೂ ಪ್ರಸಾದ್ ನೇತ್ರಾಲಯದ ವೈದ್ಯರು ಹಾಗೂ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ದತ್ತಾತ್ರೇಯ ರಾವ್ ಪ್ರಾರ್ಥಿಸಿದರು.