ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯಿತಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನಗರ ಸಭೆ, ತಾಲೂಕು ಯುವಜನ ಒಕ್ಕೂಟ, ಪಟ್ಟೆ ಶ್ರೀ ಕೃಷ್ಣ ಯುವಕ ಮಂಡಲ, ಪಟ್ಟೆ ವಾಲಿ ಫ್ರೆಂಡ್ಸ್ ಸಹಯೋಗದಲ್ಲಿ ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ. 23ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ರಕ್ಷಣಾ ಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಒಂದು ತಾಲೂಕಿನಲ್ಲಿ ಭಾಗವಹಿಸಿದ ನಂತರ ಬೇರೆ ತಾಲೂಕಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಪುಟ್ಬಾಲ್ ಸ್ಪರ್ಧೆಯನ್ನು ಅದೇ ದಿನ ಫಿಲೋಮಿನ ಪದವಿ ಕಾಲೇಜಿನಲ್ಲಿ ನಡೆಸಲಾಗುವುದು. ಪುಟ್ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆ. 20ರ ಒಳಗಾಗಿ 9164502107 ಈ ವಾಟ್ಸ ಆ್ಯಪ್ ನಂಬರ್ ಗೆ ತಮ್ಮ ತಂಡದ ಹೆಸರನ್ನು ಕಳುಹಿಸಿಕೊಡಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರುಷರ ವಿಭಾಗದ ಸ್ಪರ್ಧೆಗಳು:
100 ಮೀ , 200 ಮೀ, 400 ಮೀ, 800 ಮೀ, 1500 ಮೀ ,5000 ಮೀ, 10000 ಮೀ ಓಟ. ಉದ್ದ ಜಿಗಿತ, ಎತ್ತರ ಜಿಗಿತ,ಗುಂಡು ಎಸೆತ,ಟ್ರಿಪಲ್ ಜಂಪ್, ಜಾವೆಲಿನ್ ತ್ರೋ,ಡಿಸ್ಕಸ್ ತ್ರೋ,110 ಮೀ ಹರ್ಡಲ್ಸ್,4×100 ಮೀ ರಿಲೇ,4×400 ಮೀ ರಿಲೇ,ವಾಲಿಬಾಲ್, ತ್ರೋಬಾಲ್,ಪುಟ್ಬಾಲ್, ಖೋ ಖೋ,ಕಬಡ್ಡಿ, ಯೋಗ
ಮಹಿಳೆಯರ ವಿಭಾಗದ ಸ್ಪರ್ಧೆಗಳು
100 ಮೀ , 200 ಮೀ, 400 ಮೀ ,800 ಮೀ 1500 ಮೀ ,3000 ಮೀ ಓಟ.ಉದ್ದ ಜಿಗಿತ,ಎತ್ತರ ಜಿಗಿತ,ಗುಂಡು ಎಸೆತ,ಟ್ರಿಪಲ್ ಜಂಪ್, ಜಾವೆಲಿನ್ ತ್ರೋ,ಡಿಸ್ಕಸ್ ತ್ರೋ,100 ಮೀ ಹರ್ಡಲ್ಸ್,4×100 ಮೀ ರಿಲೇ,4×400 ಮೀ ರಿಲೇ,ವಾಲಿಬಾಲ್, ತ್ರೋಬಾಲ್,ಪುಟ್ಬಾಲ್, ಖೋ ಖೋ,ಕಬಡ್ಡಿ,ಯೋಗ
ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳು :
ಬೆಳಿಗ್ಗೆ 8.30 ರಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್,ಬ್ಯಾಡ್ಮಿಂಟನ್, ಹಾಕಿ,ಹ್ಯಾಂಡ್ ಬಾಲ್ ,ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ನೆಟ್ ಬಾಲ್ ,ಈಜು ನಡೆಯಲಿದೆ. ಪುರುಷರ ವಿಭಾಗದ 5000 ಮೀ,10,000 ಮೀ ಮಹಿಳೆಯರ ವಿಭಾಗದ 3000 ಮೀ, ಜಾವೆಲಿನ್, ಶಾಟ್ ಪುಟ್, ಉದ್ದಜಿಗಿತ, ಎತ್ತರಜಿಗಿತ, ಡಿಸ್ಕಸ್, ತ್ರಿಬಲ್ ಜಂಪ್ ನಡೆಯಲಿದೆ.
ಸಾರ್ವಜನಿಕರಿಗೆ ಮುಕ್ತ ಅವಕಾಶ :
ದಸರಾ ಕ್ರೀಡಾಕೂಟವನ್ನು ಹಬ್ಬದ ರೀತಿಯಲ್ಲಿ ಅಯೋಜಿಸಿದ್ದು ಪುತ್ತೂರು ತಾಲೂಕಿನ ಎಲ್ಲರೂ ಭಾಗವಹಿಸಬಹುದು, ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸಾರ್ವಜನಿಕರು ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ವರೆಗೆ ಹೋಗುವ ಅವಕಾಶ ಇದೆ.
- ನವೀನ್ ಭಂಡಾರಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಪುತ್ತೂರು