ಮಾಣಿ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವಾಹನವನ್ನು ತಡೆದು, ದಂಡ ವಿಧಿಸಿದ ಘಟನೆ ಮಾಣಿಯಲ್ಲಿ ನಡೆದಿದೆ.
ಸ್ವಚ್ಛತೆ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಮಾಡಿದರೂ, ಸಂದೇಶ ನೀಡಿದರೂ ತಲೆಕೆಡಿಸಿಕೊಳ್ಳದ ನಾಗರಿಕರಿಗೆ ಇದೀಗ ದಂಡ ವಿಧಿಸಲು ಗ್ರಾಮ ಪಂಚಾಯತ್ ಮುಂದಾಗಿದೆ.
ಲಾರಿವೊಂದರಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮ ಪಂಚಾಯತ್, ದಂಡ ವಿಧಿಸಿದೆ. ಮಾತ್ರವಲ್ಲ, ಎಸೆದ ತ್ಯಾಜ್ಯವನ್ನು ಅದೇ ಲಾರಿಯಲ್ಲಿ ತುಂಬಿಸಿ ವಾಪಾಸ್ ಕಳಿಸಲಾಗಿದೆ.