ಪುತ್ತೂರು: ‘ತೆರೆದ ಮನೆ’ ಕಾರ್ಯಕ್ರಮದಡಿ ಇಲ್ಲಿಯ ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
ಠಾಣೆಯ ಪರಿಚಯ, ಪೊಲೀಸ್ ಕಾರ್ಯಚಟುವಟಿಕೆಗಳು, ಪೋಕ್ಸೋ ಕಾಯಿದೆ, ಸಾಮಾಜಿಕ ಜಾಲತಾಣಗಳಿಂದ ಆಗುವ ತೊಂದರೆ, ಅನಾಮಧೇಯ ಕರೆಗಳು ಮತ್ತು ಮೆಸೇಜುಗಳ ಕುರಿತು ಮಾಹಿತಿ, ಮಕ್ಕಳ ಹಕ್ಕುಗಳು, ಮಕ್ಕಳ ಸಹಾಯವಾಣಿ 1098, 112 ವಾಹನದ ಉಪಯೋಗ ಹಾಗೂ ಇನ್ನಿತರ ಕಾನೂನು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಠಾಣೆಯ ನಿರೀಕ್ಷಕರು, ಸಿಬ್ಬಂದಿಗಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.