ದೊಡ್ಡ ಬಜೆಟಿನಲ್ಲಿ `ಕಾಂತಾರ 2’ ಸೆಟ್ಟೇರುವುದು ಪಕ್ಕಾ! | `ಕಾಂತಾರ 2’ ಯಾವ ಹಂತದಲ್ಲಿದೆ ಎನ್ನುವುದು ಈಗ ಬಹಿರಂಗ!!

ಇನ್ನಿಲ್ಲದ ಸಕ್ಸಸ್ ಕಂಡಿದ್ದ ಕಾಂತಾರ ಸಿನಿಮಾದ ಬಳಿಕ ಕಾಂತಾರ 2 ಬರಲಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. ಇದೀಗ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರೇ ಇದನ್ನು ಖಾತ್ರಿಪಡಿಸಿದ್ದಾರೆ.

ಸುಮಾರು 100 ಕೋಟಿ ರೂ.ನಲ್ಲಿ ಕಾಂತಾರ 2 ಸೆಟ್ಟೇರುವ ಸಾಧ್ಯತೆ ಇದೆ. ಅಂದರೆ ಕಾಂತಾರ ಚಿತ್ರಕ್ಕಿಂತಲೂ ಹೆಚ್ಚು – ಕಮ್ಮಿ 10 ಪಟ್ಟು ಹೆಚ್ಚು ಬಜೆಟ್ ಹೊಂದಿದ್ದು, ಅದ್ಧೂರಿಯಾಗಿ ತೆರೆ ಕಾಣಲಿದೆಯಂತೆ. ಸದ್ಯ ಕಾಂತಾರ 2 ಬರವಣಿಗೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ ಬಿ. ಶೆಟ್ಟಿ ನಟನೆಯ ಟೋಬಿ ಸಿನಿಮಾ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದ್ದು, ಇದರ ಪ್ರಚಾರದಲ್ಲಿ ಪಾಲ್ಗೊಂಡು ಈ ಮಾಹಿತಿಯನ್ನು ಹೊರಗೆಡವಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top