ಪುತ್ತೂರು: ತಾಲೂಕಿನ ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಹಾಗೂ ಯಕ್ಷಗಾನ ಕಲಾಕೂಟದ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಗಳವಾರ ರಾತ್ರಿ ವಿವಿಧ ವೈದಿಕ ಕಾರ್ಯಕ್ರಮ, ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.
ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದಲ್ಲಿ ನಡೆದ ಉತ್ಸವದ ಅಂಗವಾಗಿ ಬೆಳಿಗ್ಗೆ 9 ಕ್ಕೆ ಮೂರ್ತಿ ಪ್ರತಿಷ್ಠಾಪನೆ ನಡೆದು, ಭಜನೆ, ಮಂಗಳಾರತಿ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಷಣ್ಮುಖದೇವ ಭಜನಾ ಮಂಡಳಿ ಹಾಗೂ ಯಕ್ಷಗಾನ ಕಲಾಕೂಟದ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಿರೀಶ್ ಪಾದೆಕಲ್ಲು, ಬೆಂಗಳೂರು ಉಚ್ಚನ್ಯಾಯಾಲಯದ ನ್ಯಾಯವಾದಿ ಮೋಹಿತ್ ಕುಮಾರ್ ಕೆ. ಕುಂಡಡ್ಕ, ಪೆರ್ಲಂಪಾಡಿ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ನೀಲಾವತಿ ಪಾಲ್ಗೊಂಡು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಹಾಗೂ ಯಕ್ಷಗಾನ ಕಲಾಕೂಟದ ಕಾರ್ಯದರ್ಶಿ ಶ್ರೀನಿವಾಸ ಕೊಂರ್ಬಡ್ಕ ದೊಡ್ಡಮನೆ, ಖಜಾಂಚಿ ಪ್ರವೀಣ್ ಜಿ.ಕೆ. ಉಪಸ್ಥಿತರಿದ್ದರು.
ಬಳಿಕ ನಡೆದ ಶೋಭಾಯಾತ್ರೆಯಲ್ಲಿ ಪೆರ್ಲಂಪಾಡಿ ಷಣ್ಮುಖದೇವ ಮಹಿಳಾ ಕುಣಿತ ಭಜನಾ ಮಂಡಳಿ, ಕೊಳ್ತಿಗೆ ಶ್ರೀ ಮಹಮ್ಮಾಯಿ ಕುಣಿತ ಭಜನಾ ತಂಡ ಹಾಗೂ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಕುಣಿತ ಭಜನೆ ತಂಡಗಳು ಮೆರುಗು ನೀಡಿದವು.