ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ | ಶೋಭಾಯಾತ್ರೆಗೆ ಅಡ್ಡಿಯಾಗದಂತೆ ರಸ್ತೆ ಶ್ರಮದಾನ

ಕೆದಿಲ: ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುವ ಶ್ರೀ ಗಣೇಶೋತ್ಸವದ ಅಂಗವಾಗಿ ಶ್ರೀ ಗಣೇಶ ವಿಗ್ರಹ ಶೋಭಾಯಾತ್ರೆ ಮಂಗಳವಾರ ರಾತ್ರಿ ನಡೆಯಲಿರುವುದರಿಂದ ಶೋಭಾಯಾತ್ರೆ ಸಾಗುವ ಬೀಟಿಗೆ – ಕ್ಷೇತ್ರಪಳಿಕೆ – ಕಾಂತುಕೋಡಿ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸಲಾಯಿತು.

ಈ ರಸ್ತೆ ಗುಂಡಿಗಳಿಂದ ಕೂಡಿದ್ದು, ಶೋಭಾಯಾತ್ರೆಗೆ ಸಮಸ್ಯೆ ಉಂಟಾಗಲಿದೆ ಎಂಬ ಹಿನ್ನೆಲೆಯಲ್ಲಿ ಈ ವಾರ್ಡಿನ ಸದಸ್ಯ ಶ್ಯಾಮ ಪ್ರಸಾದ್ ತಾವೇ ಸ್ವತಃ ತಮ್ಮ ಪಿಕಪ್ ವಾಹನದಲ್ಲಿ ಜಲ್ಲಿಕಲ್ಲು ಹಾಗೂ ಕ್ರಶರ್ ಹುಡಿ ಹಾಕಿ ಸರಿಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪದ್ಮನಾಭ ಗೌಡ ವಾಲ್ತಾಜೆ, ಕಾರ್ಯಕರ್ತರಾದ ಸೀನಪ್ಪ ಗೌಡ ವಾಲ್ತಾಜೆ, ಐತಪ್ಪ ಗೌಡ ಕಾಂತುಕೋಡಿ, ಸದಾಶಿವ ಕಾಂತುಕೋಡಿ ಸಹಕಾರ ನೀಡಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top