ಮಾಣಿ: ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದ ವತಿಯಿಂದ ಪೆರ್ನೆ ಯುವಸ್ಪಂದನದ ಸಹಕಾರದೊಂದಿಗೆ ನಡೆಯುವ 28ನೇ ವರ್ಷದ ಗಣೇಶೋತ್ಸವದ ಶ್ರೀ ಗಣೇಶನ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು.

ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.

ಬೆಳಿಗ್ಗೆ 9 ಗಂಟೆಗೆ ಪೆರ್ನೆ ಕೃಷಿಕರಾದ ರಾಮಣ್ಣ ಗೌಡ ಪಡ್ಡಾಯಿ ಗಣೇಶೋತ್ಸವದ ವಿವಿಧ ಕಾರ್ಯಕ್ರಮಗಳನ್ನು ಧ್ವಜಾರೋಹಣ ಮಾಡಿ, ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದ ಸ್ಥಾಪಕ ಸದಸ್ಯ ವೆಂಕಪ್ಪ ನಾಯ್ಕ ಅಗರ್ತಬೈಲು, ಮಂದಿರದ ಸದಸ್ಯರು, ಯುವಸ್ಪಂದನದ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಪ್ರತಿಷ್ಠಾಪನೆಯ ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ ಆಕರ್ಷಕ ಸುಡುಮದ್ದು ಪ್ರದರ್ಶನ, ನಾಸಿಕ್ ಬ್ಯಾಂಡ್, ಕುಣಿತ ಭಜನೆ, ಹುಲಿವೇಷ, ಗೊಂಬೆ, ಟ್ಯಾಬ್ಲೋಗಳೊಂದಿಗೆ ಶೋಭಾ ಯಾತ್ರೆ ನಡೆಯಲಿದೆ.