ಪುತ್ತೂರು: ಆನಂದ ಫಿಲಂಸ್ ಮತ್ತು ದ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣದ “ಯಾನ್ ಸೂಪರ್ ಸ್ಟಾರ್” ತುಳು ಚಲನಚಿತ್ರ ಸೆ. 22ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾನ್ ಸೂಪರ್ ಸ್ಟಾರ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಅವರು ತಿಳಿಸಿದರು.
ಸೆನ್ಸಾರ್ ನಲ್ಲಿ ಯು.ಎ. ಸರ್ಟಿಫಿಕೇಟ್ ಪಡೆದುಕೊಂಡಿರುವ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ ಪಡೆದಿದೆ. ತುಳು ಸಿನಿಮಾರಂಗಕ್ಕೆ ಯಾನ್ ಸೂಪರ್ ಸ್ಟಾರ್ ಮೂಲಕ ಒಂದು ಸದಭಿರುಚಿಯ ಚಿತ್ರ ಲಭಿಸಲಿದ್ದು, ಕುಟುಂಬ ಸಮೇತ ಸಿನಿಮಾ ವೀಕ್ಷಿಸ ಬಹುದಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಮುಂಬಯಿ, ಪೂನಾ ಮತ್ತಿತರ ಕಡೆಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದ್ದು, ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಬೆಂಗಳೂರು ಮತ್ತು ಗಲ್ಫ್ ದೇಶಗಳಲ್ಲೂ ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಉಡುಪಿ ಸುತ್ತಮುತ್ತ ಒಂದೇ ಹಂತದಲ್ಲಿ 25 ದಿನಗಳ ಕಾಲ ಯಾನ್ ಸೂಪರ್ ಸ್ಟಾರ್ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು. ಮುಖ್ಯವಾಗಿ ಇಲ್ಲಿ ಜನಮನ್ನಣೆ ಪಡೆದಿರುವ ಸಿಐಡಿ ಧಾರಾವಾಹಿಯ ಮುಂಬಯಿ ಕಲಾವಿದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಲ್ ಅವರೊಂದಿಗೆ ತುಳುನಾಡಿನ ಖ್ಯಾತ ಕಲಾವಿದರಾದ ಕುಸೇಲ್ದರಸೆ ನವೀನ್ ಡಿ. ಪಡೀಲ್, ನವರಾಸ ರಾಜೆ ಭೋಜರಾಜ ವಾಮಂಜೂರು, ಮಾನಸಿ ಸುಧೀರ್, ಅನ್ ಷಾ, ಅಶೋಕ್ ಪಕ್ಕಳ, ಮಾಸ್ಟರ್ ಅತಿಶ್ ಶೆಟ್ಟಿ, ಮಾಸ್ಟರ್ ಅರುಷ್ ಯು ಪೂಜಾರಿ, ಶ್ರೀಯಾ ಹೆಗ್ಡೆ ಮೊದಲಾದವರು ತಾರಾಗಣದಲ್ಲಿದ್ದಾರೆ.
ಸಂತೋಷ್ ಶೆಟ್ಟಿಯವರ ಕತೆಗೆ ಸಚಿನ್ ಶೆಟ್ಟಿ ಕುಂಬಳೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆ, ಅಂಕಣ ಜೋಷಿ, ಸಂತೋಷ್ ಶೆಟ್ಟಿ, ಸಾಹಿತ್ಯ, ಹಾಡು, ಸಂಗೀತ ವಿ. ಮನೋಹರ್, ಗುರುಕಿರಣ್, ಹಿನ್ನಲೆ ಸಂಗೀತ ಸಂಜಯ್ ವಾಂದ್ರೇಕರ್, ಕ್ಯಾಮರಾ ಕೃಷ್ಣರಾಜ್ ಕೋಟ್ಯಾನ್, ಸಾಹಸ ಆನಂದ ಶೆಟ್ಟಿ, ಸಹ ನಿರ್ದೇಶನ ರಾಮ್ ದಾಸ್ ಸಸಿಹಿತ್ಲು, ಪ್ರೈಡ್ ಸುಬ್ರಹ್ಮಣ್ಯ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಸತೀಶ್ ದುಬೆ, ಕ್ರಿಯೇಟಿವ್ ಡೈರಕ್ಟರ್ ಕ್ರಿಸ್ತಬೆಲ್ಲೆ ಡಿ’ಸೋಜ, ಪ್ರೊಡಕ್ಷನ್ ಹೆಡ್ ಚಂದ್ರಕಾಂತ್ ಭಂಡಾರಿ ಸಹಕರಿಸಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಮರಮ್ಯಾನ್ ಕೃಷ್ಣರಾಜ್ ಕೋಟ್ಯಾನ್, ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ ಉಪಸ್ಥಿತರಿದ್ದರು.