ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವಿಟ್ಲ ಪೆರ್ನೆ ವಲಯದ ಕೆದಿಲ “ಬಿ”ಒಕ್ಕೂಟದ ವತಿಯಿಂದ ಸಂಪೂರ್ಣ ಸುರಕ್ಷಾ ಚೆಕ್ ಹಸ್ತಾಂತರಿಸಲಾಯಿತು.
ಶ್ರೀಜನನಿ ಒಕ್ಕೂಟದ ಸದಸ್ಯೆ ಶೋಭಾ ಪೂಜಾರಿ ಅವರ ಪತಿ ಶೇಖರ ಪೂಜಾರಿಯವರು ರಸ್ತೆ ಅಪಘಾತದಲ್ಲಿ ಮರಣಹೊಂದಿದ್ದು, ಸಂಪೂರ್ಣ ಸುರಕ್ಷಾದ 25 ಸಾವಿರ ರೂ. ಚೆಕ್ಕನ್ನು ಪೆರ್ನೆ ವಲಯ ಮೇಲ್ವಿಚಾರಕಿ ಶರದಾ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ಜಯಂತಿ, ಉಪಾಧ್ಯಕ್ಷ ಸುಂದರ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲ ಸದಸ್ಯರಾದ ಜಗದೀಶ, ಗಿರೀಶ ಉಪಸ್ಥಿತರಿದ್ದರು.