ಹೆಲ್ತ್‌ ಎಟಿಎಂ ಲೋಕಾರ್ಪಣೆ ಮಾಡಿದ ಸಿಎಂ | ಆರೋಗ್ಯ ಸೇವೆ ಹೇಗೆ, ಪ್ರಯೋಜನ ಏನು?

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಹೆಲ್ತ್ ಕಿಯೋಸ್ಕ್” (ಹೆಲ್ತ್‌ ಎಟಿಎಂ) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ಕಾರ್ಪೋರೇಟ್‌ ಕಂಪನಿಗಳ (ಸಿಎಸ್‌ಆರ್‌ ನಿಧಿಯಡಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೆಲ್ತ್‌ ಎಟಿಎಮ್ ಯೋಜನೆ ಜಾರಿಗೊಂಡಿದೆ. ಆರೋಗ್ಯ ಕೇಂದ್ರಗಳಲ್ಲಿ, ವೆಲ್‌ನೆಸ್ ಸೆಂಟರ್ ಸೇರಿದಂತೆ 25 ಆಯ್ದ ಸ್ಥಳಗಳಲ್ಲಿ ಹೆಲ್ತ್ ಎಟಿಎಮ್ ಅನ್ನು ಆರಂಭ ಮಾಡಲಾಗಿದೆ. ಇದರಿಂದ ಅನೇಕ ಪ್ರಯೋಜನಗಳಿವೆ. ಅಲ್ಲದೆ, ಹೆಲ್ತ್ ಎಟಿಎಂ ಹೇಗೆ ಕಾರ್ಯನಿರ್ವಹಣೆ ಮಾಡಲಿದೆ ಎಂಬುದನ್ನು ನೋಡೋಣ.

ಆರೋಗ್ಯ ಮಿತ್ರ
ಸ್ಮಾರ್ಟ್ ಹೆಲ್ತ್ ಕಿಯೋಸ್ಕ್‌ಗಳ ಮೂಲಕ ತಪಾಸಣೆ ಮತ್ತು ಶೀಘ್ರ ರೋಗ ಪತ್ತೆ ಜತೆಗೆ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಸಲಾಗುತ್ತಿದೆ. ಇದಕ್ಕಾಗಿ ವಿಶಿಷ್ಟ ಹೆಲ್ತ್ ಎಟಿಎಂ ಜಾರಿ ಮಾಡಲಾಗಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ವತಿಯಿಂದ ಜಿಲ್ಲೆಯಲ್ಲಿ ‘ಆರೋಗ್ಯ ಮಿತ್ರ’ ಯೋಜನೆಯನ್ನು ಜಾರಿ ಮಾಡಲಾಗಿದೆ. ಕಲಬುರಗಿ ಜಿಲ್ಲೆಗೆ ಎಚ್.ಪಿ ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು ಸಿಎಸ್‌ಆರ್‌ ಅನುದಾನದ ಅಡಿಯಲ್ಲಿ ಪಡೆದು ಭಾನುವಾರ (ಸೆಪ್ಟೆಂಬರ್‌ 17) ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಹೆಲ್ತ್ ಎಟಿಎಂ ಕಾರ್ಯನಿರ್ವಹಣೆ ಹೇಗೆ?
ಆರೋಗ್ಯ ಎಟಿಎಂ ಆರೋಗ್ಯ ಕ್ಷೇತ್ರದಲ್ಲಿ ಇದು ನೂತನ ತಂತ್ರಜ್ಞಾನವಾಗಿದ್ದು, ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚುವ ಮತ್ತು ರೋಗವನ್ನು ತಡೆಗಟ್ಟಬಹುದಾದ ಆರೋಗ್ಯ ಸೇವೆಗಳನ್ನು ಸುಲಭವಾಗಿ ಹಾಗೂ ಕೈಗಟುಕುವ ದರದಲ್ಲಿ ಒದಗಿಸುತ್ತದೆ.
ನಗರ ಪ್ರದೇಶಗಳಲ್ಲಿ ಜನರ ಜೀವನ ಶೈಲಿಗೆ ಅನುಗುಣವಾಗಿ, ಕಡಿಮೆ ಸಮಯದಲ್ಲಿ ಪರೀಕ್ಷೆಗಳನ್ನು ಮಾಡುವ ಮೂಲಕ ಸಮಯ ಮತ್ತು ಹಣವನ್ನು ಉಳಿಸಬಹುದು.
ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವ ಆರೋಗ್ಯ ಸಿಬ್ಬಂದಿ ಅಂತರವನ್ನು ಕಡಿಮೆ ಮಾಡಿ ದುರ್ಗಮ ಪ್ರದೇಶಗಳಿಗೂ ಕೂಡ ಆರೋಗ್ಯ ಸೇವೆಗಳನ್ನು ತಲುಪಿಸಬಹುದು.
ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಸಮಯದ ಹಿಂದುಳಿದ ವರ್ಗವನ್ನು ಸಬಲೀಕರಣಗೊಳಿಸುವುದು ಹೆಲ್ತ್ ಎಟಿಎಂ ಗುರಿಯಾಗಿದೆ.































 
 

ಹೆಲ್ತ್ ಎಟಿಎಂನ ಪ್ರಯೋಜನಗಳು
ಜನಸಂದಣಿ ಪ್ರದೇಶಗಳಲ್ಲಿ ಲಭ್ಯತೆ ಇರುವ ಆರೋಗ್ಯ ಎಟಿಎಂಗಳ ಮೂಲಕ ಸರಳವಾದ ಆರೋಗ್ಯ ಸೇವೆಗಳ ಲಭ್ಯತೆ.
ನಿಖರವಾದ ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಎಟಿಎಂಗಳನ್ನೂ ಬಳಸುವುದರಿಂದ ಸಮಯ ಮತ್ತು ಹಣ ಉಳಿತಾಯ
ಸಮಗ್ರ ಆರೋಗ್ಯ ಸೇವೆಗಳಿಂದ ತುರ್ತು ಸ್ಪಂದನೆ ರೋಗಿಗಳಿಗೆ ಆತ್ಮಸ್ಟೈರ್ಯ ತುಂಬುವುದರ ಮೂಲಕ ಉತ್ತಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮ ಲಭ್ಯತೆ.
ನಿರಂತರ ಆರೋಗ್ಯ ತಪಾಸಣೆ ಮತ್ತು ಮೇಲ್ವಿಚಾರಣೆಯ ಮೂಲಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು ಸಹಕಾರಿ.
ರೋಗಿಯ ದಾಖಲೆಗಳನ್ನು ಸುರಕ್ಷಿತವಾಗಿ ಮತ್ತು ಗೌಪ್ಯವಾಗಿ ಇಡಲಾಗುತ್ತದೆ.
10 ನಿಮಿಷದಲ್ಲಿ 50ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಬಹುದು.
ತ್ವರಿತವಾಗಿ ಆರೋಗ್ಯದ ವರದಿಯನ್ನು ನೀಡಲಾಗುತ್ತದೆ.
ಆರೋಗ್ಯಕ್ಕೆ ಅಗತ್ಯವಿರುವ ಆಹಾರದ ಮಾಹಿತಿಯನ್ನು ನೀಡಲಾಗುವುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top