ವಿಜ್ಞಾನದ ಜತೆ ಭಾಷೆ ಬೆಳೆಯಬೇಕು | ಹಿಂದಿ ದಿನಾಚರಣೆಯಲ್ಲಿ ಪ್ರೊ. ಶ್ರೀಪತಿ ಕಲ್ಲೂರಾಯ

ಪುತ್ತೂರು: ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಭಾಷೆ ಮುಖ್ಯ. ಭಾಷೆ ಎಂಬುವುದು ಒಂದು ವಿಜ್ಞಾನ. ಅದರಲ್ಲಿರುವ ಅನೇಕ ವಿಸ್ಮಯಗಳನ್ನು ನಾವು ಕಲಿಯಬೇಕು. ಭಾರತ ಅನೇಕ ಭಾಷೆಗಳಿಂದ ಕೂಡಿರುವುದು ಮಾತ್ರವಲ್ಲದೆ ಅದರ ಹಿನ್ನಲೆಯಿಂದ ಹೆಚ್ಚು ಪ್ರಖ್ಯಾತವಾಗಿದೆ. ವಿಜ್ಞಾನದ ಜೊತೆಗೆ ಭಾಷೆ ಕೂಡಾ ಬೆಳೆಯಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ಹಿಂದಿ ಸಂಘ ಹಾಗೂ ಐಕ್ಯೂಏಸಿ ಜಂಟಿ ಸಹಯೋಗದಲ್ಲಿ   ಆಯೋಜಿಸಿದ  ಹಿಂದಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮುಖ್ಯ ಅತಿಥಿಯಾಗಿ, ಎಲ್ಲಾ ಭಾಷೆಗಳು ಅಗತ್ಯವಾದದ್ದು. ಹಿಂದಿ ನಮ್ಮ ರಾಷ್ಟ್ರ ಭಾಷೆ. . ನಾವು ಎಲ್ಲಾ ಭಾಷೆಗಳನ್ನು ಕಲಿಯುತ್ತೇವೆಯೋ ಅಷ್ಟು ನಮ್ಮ ಜ್ಞಾನ ವಿಸ್ತಾರಗೊಳ್ಳುತ್ತದೆ. ನಾವು ನಮ್ಮ ರಾಷ್ಟ್ರ ಭಾಷೆಯನ್ನು ಪ್ರೀತಿಸೋಣ, ಬೆಳೆಸೋಣ ಎಂದು ಹೇಳಿದರು.



































 
 

ವೇದಿಕೆಯಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ, ಕಲಾ ವಿಭಾಗದ ಡೀನ್ ಡಾ. ದುರ್ಗಾರತ್ನ, ಹಿಂದಿ ಭಾಷೆ ವಿಭಾಗದ ವಿದ್ಯಾರ್ಥಿನಿ ಸ್ವಸ್ತಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮೃತಾ ಸ್ವಾಗತಿಸಿ, ಭವ್ಯ ಪಟೀಲ್ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ನಿರೂಪಿಸಿದರು.ಹಿಂದಿ ವಿಭಾಗದ ಉಪನ್ಯಾಸಕಿ ಪೂಜಾ ವೈ.ಡಿ., ಪಾವನ ಸಹಕರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top