ಚಾರ್ಮಾಡಿ ಘಾಟ್ ಪ್ರಪಾತಕ್ಕೆ ಉರುಳಿದ ಲಾರಿ!

ಬೆಳ್ತಂಗಡಿ : ದಟ್ಟ ಮಂಜು ಆವರಿಸಿದ ಪರಿಣಾಮ ಚಾರ್ಮಾಡಿ ಘಾಟಿಯಯಲ್ಲಿ ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ನೂರು ಅಡಿ ಆಳದ ಪ್ರಪಾತಕ್ಕೆ ಉರುಳಿದ ಘಟನೆ ನಡೆದಿದೆ.

ಸೋಮನಕಾಡು ನೀರಿನ ಫಾಲ್ಸ್ ಸಮೀಪ ಈ ಅಪಘಾತ ಸಂಭವಿಸಿದ್ದು, ಚಾಲಕ ಹಾಗೂ ನಿರ್ವಾಹಕ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಅದೃಷ್ಟವಶಾತ್ ಲಾರಿ ಉರುಳಿ ಪ್ರಪಾತದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಅಲ್ಲೇ ಮರದಲ್ಲೇ ಸಿಲುಕಿಕೊಂಡಿರುವುದರಿಂದ ಚಾಲಕ, ನಿರ್ವಾಹಕ ಪ್ರಾಣಾಪಾಯದಿಂದ ಪಾರಾದಂತಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top