ಮಂಗಳೂರು (ಬೆಂಗಳೂರು): ವಂಚನೆ ಪ್ರಕರಣದ ಆರೋಪದಲ್ಲಿ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಅವರ ಕೋಟ್ಯಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಚ್ ವಾರೆಂಟ್ ಪಡೆದು ಶೋಧ ಕಾರ್ಯ ನಡೆಸಿದ ಸಿಸಿಬಿ ಪೊಲೀಸ್ ಪಡೆ ಉಡುಪಿಯ ಉಳ್ಳೂರು ಶ್ರೀರಾಮ ಸೊಸೈಟಿ ಆಸ್ತಿ, ಬಂಗಾರ ಪತ್ತೆ ಮಾಡಿದೆ. 1 ಕೋಟಿ 08 ಲಕ್ಷ ರೂಪಾಯಿ ಖಾಯಂ ಠೇವಣಿ, ಸೊಸೈಟಿ ಖಾತೆಯಲ್ಲಿ 40 ಲಕ್ಷ ರೂ. ನಗದು ಮತ್ತು 400 ಗ್ರಾಂ ಚಿನ್ನ ಕೂಡ ಪತ್ತೆ ಮಾಡಿದೆ. ಅಲ್ಲದೇ ತನ್ನ ಸ್ನೇಹಿತೆಯ ಹೆಸರಿನಲ್ಲಿ ಕಾರ್ಕಳದ ಬೈಲೂರು ಎಂಬಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸುತ್ತಿರುವುದು ಬೆಳಕಿಗೆ ಬಂದಿದೆ. ಹಣ ವಸೂಲಿ ಪ್ರಕರಣದಲ್ಲಿ ಶ್ರೀಕಾಂತ್’ನನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ.