ಮುಂಡಾಜೆ: ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು | ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು 5 ಲಕ್ಷ ರೂ.!

ಬೆಳ್ತಂಗಡಿ: ಇಲ್ಲಿನ ಮುಂಡಾಜೆಯ ಮನೆಯೊಂದರಿಂದ ಚಿನ್ನಾಭರಣ ಕಳವಾದ ಘಟನೆ ಸೆ. 12ರಂದು ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣದ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮುಂಡಾಜೆ ಗ್ರಾಮದ ನಿವಾಸಿ ಕಡಂಬಳ್ಳಿಯ ಪ್ರಮೋದ್ ವಿ. ಭಿಡೆ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮನೆ ಕೆಲಸಕ್ಕೆ ಬಂದವರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಾಗಿದೆ.

ಜುಲೈ 5ರಂದು ಮನೆ ಸಾರಣೆ ಹಾಗೂ ಪೈಂಟಿಂಗ್ ಕೆಲಸ ಪ್ರಾರಂಭಿಸಿದ್ದು, ಸುಮಾರು 10ರಿಂದ 13 ಜನ ಕೆಲಸಕ್ಕೆ ಬಂದಿದ್ದರು. ಇದಕ್ಕೆ ಮುಂಚಿತವಾಗಿ ಮನೆಯಲ್ಲಿದ್ದ ಚಿನ್ನಾಭರಣವನ್ನು ನೆಲಮಾಳಿಗೆಯಲ್ಲಿರಿಸಲಾಗಿತ್ತು. ಆದರೆ ನೆಲಮಾಳಿಗೆಯ ಬಾಗಿಲಿಗೆ ಬೀಗ ಹಾಕಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜುಲೈ 19ರಂದು ಕೆಲಸ ಮುಗಿಸಿದ್ದು, ಕೆಲಸಗಾರರು ತೆರಳಿದ್ದರು. ಸೆಪ್ಟೆಂಬರ್ 12ರಂದು ಮನೆಯವರು ಕಾರ್ಯಕ್ರಮಕ್ಕೆ ತೆರಳಲು ಹೊರಡುವ ವೇಳೆ, ಆಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ. ಸುಮಾರು 122 ಗ್ರಾಂನ ಚಿನ್ನಾಭರಣಗಳು ಕಳವಾಗಿದ್ದು, ಇದರ ಮೌಲ್ಯ ಸುಮಾರು 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಧರ್ಮಸ್ಥಳ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top