ಅಕ್ರಮ ಸಕ್ರಮಕ್ಕೆ ಪಡೆದಿದ್ದ ಲಂಚದ ಹಣ ವಾಪಾಸ್ | ಶಾಸಕರು ನೀಡಿದ ಗಡುವಿನೊಳಗೆ ಹಣ ವಾಪಸ್ ಮಾಡಿದ ಉಗ್ರಾಣಿ…!

ಪುತ್ತೂರು; ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಲು ಮಹಿಳೆಯೊಬ್ಬರಿಂದ ಪಡೆದಿದ್ದ ಲಂಚದ ಹಣವನ್ನು ಉಗ್ರಾಣಿಯೊಬ್ಬರು ಅವರಿಗೆ ನೀಡಿದ ಗಡುವಿನೊಳಗೆ ಮರಳಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಶಾಸಕರಾದ ಅಶೋಕ್ ರೈಯವರು ಕುಂಡಡ್ಕ ದೇವಸ್ಥಾನಕ್ಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಕುಳ ಗ್ರಾಮದ ಮಹಿಳೆ ಚಂದ್ರಾವತಿ ಎಂಬವರು ಶಾಸಕರ ಬಳಿ ಬಂದು ನನ್ನ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿಲ್ಲ. ನನಗೆ ಅಕ್ರಮ ಸಕ್ರಮ ಮಂಜೂರು ಮಾಡಿಲ್ಲ. ನಾನು ಉಗ್ರಾಣಿಗೆ 30 ಸಾವಿರ ರೂ. ನೀಡಿದ್ದೇನೆ. ಬೀಡಿ ಕಟ್ಟಿ ಜೀವನ ಮಾಡುವ ನನ್ನಿಂದ ಹಣ ಪಡೆದರೂ ನನ್ನ ಕೆಲಸ ಮಾಡಿಕೊಟ್ಟಿಲ್ಲ. ನನಗೆ ನ್ಯಾಯ ಕೊಡಬೇಕು. ನನಗೆ ಅಕ್ರಮ ಸಕ್ರಮ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಹೇಳಿಕೊಂಡಿದ್ದರು.

ಮಹಿಳೆಯ ಆರೋಪವನ್ನು ಆಲಿಸಿದ ಶಾಸಕರು ತಕ್ಷಣವೇ ಉಗ್ರಾಣಿಯ ನಂಬರ್ ಪಡೆದು ಕರೆ ಮಾಡಿ ನೀವು ಚಂದ್ರಾವತಿಯವರಿಂದ ಅಕ್ರಮ ಸಕ್ರಮ ವಿಲೇವಾರಿಗೆ ಪಡೆದುಕೊಂಡಿರುವ 30 ಸಾವಿರ ರೂ.ವನ್ನು ಒಂದು ವಾರದೊಳಗೆ ಮರಳಿ ಕೊಡಬೇಕು. ಇಲ್ಲವಾದರೆ ನಿಮ್ಮನ್ನು ಕೆಲಸದಿಂದ ಸಸ್ಪೆಂಡ್ ಮಾಡಿಸುತ್ತೇನೆ. ಬಡವರಿಂದ ಹಣ ಯಾಕೆ ಪಡೆದುಕೊಂಡಿದ್ದೀರಿ ಎಂದು ಹೇಳಿ ಪಡೆದ ಹಣವನ್ನು ಮರಳಿಸಲು ಒಂದು ವಾರದ ಗಡುವು ನೀಡಿದ್ದರು.



































 
 

ಸೆ. 14ರಂದು ಮಹಿಳೆಯ ಮನೆಗೆ ಬಂದ ಉಗ್ರಾಣಿ ತಾನು ಪಡೆದುಕೊಂಡಿದ್ದ 30 ಸಾವಿರ ರೂ. ಲಂಚದ ಹಣವನ್ನು ಮರಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top