ಬೆಳ್ತಂಗಡಿ: ಕಾಡಿಗಟ್ಟಿದ್ದಷ್ಟು ನಾಡಿಗೆ ದಾಳಿ ಇಡುವ ಆನೆಗಳ ಪರಾಕ್ರಮ ಮತ್ತೆ ಮುಂದುವರಿದಿದೆ.
ಧರ್ಮಸ್ಥಳದ ಕಾಡಂಚಿನ ನಾಡಿಗೆ ಆನೆಗಳ ದಾಳಿ ಹೆಚ್ಚಾದಾಗ, ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟುವ ಕೆಲಸ ನಿರ್ವಹಿಸಿದ್ದವು. ಆದರೆ ಹೀಗೆ ಅಟ್ಟಿದ ಕಾಡಾನೆಗಳು ಗುರುವಾರ ಬೆಳಿಗ್ಗೆ ಧರ್ಮಸ್ಥಳ ಆಸುಪಾಸಿನಲ್ಲಿ ಪ್ರತ್ಯಕ್ಷವಾಗಿವೆ.
ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಧರ್ಮಸ್ಥಳದ ಕೆಲ ತೋಟಗಳಿಗೆ ನುಗ್ಗಿ, ಹಾಳು ಗೆಡವಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ, ಅರಣ್ಯ ಇಲಾಖೆ ಡಿಆರ್ ಎಫ್ಒ ಹರಿಪ್ರಸಾದ್, ರಾಜೇಶ್, ಗಸ್ತು ಪಾಲಕರಾದ ಸಂತೋಷ, ಸದಾನಂದ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸೇರಿ ಬುಧವಾರ ರಾತ್ರಿ ಕಾರ್ಯಾಚರಣೆ ಮಾಡಿದರು. ಕಾಡಾನೆಗಳನ್ನು ಅರಣ್ಯದೊಳಗೆ ಅಟ್ಟಿಯೂ ಆಗಿತ್ತು. ಆದರೆ ಗುರುವಾರ ಬೆಳಿಗ್ಗೆ ಅದೇ ಕಾಡಾನೆಗಳು ಮತ್ತೆ ಧರ್ಮಸ್ಥಳ ಆಸುಪಾಸಿನಲ್ಲಿ ಕಾಣಸಿಕ್ಕಿವೆ.
ಒಟ್ಟಿನಲ್ಲಿ ಸ್ಥಳೀಯರ ನಿದ್ದೆಗೆಡಿಸಿರುವ ಕಾಡಾನೆಗಳು, ಆತಂಕದಲ್ಲೇ ದಿನದೂಡುವಂತಾಗಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.