ರಾಜ್ಯದ 195 ತಾಲೂಕುಗಳು ಬರ ಪೀಡಿತ! | ಸಿಎಂಗೆ ಶಿಫಾರಸು ಮಾಡಲು ಸಂಪುಟ ಸಭೆ ತೀರ್ಮಾನ | ಈ ಹಿಂದೆ 62 ತಾಲೂಕುಗಳು ಬರಪೀಡಿತವಾಗಿತ್ತೆಂದು ಮಾಹಿತಿ ನೀಡಿದ ಸಚಿವ

ಬೆಂಗಳೂರು: ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸಂಪುಟ ಉಪಸಮಿತಿಯ ಸಭೆಯ ಬಳಿಕ ಕೃಷ್ಣ ಭೈರೇಗೌಡ ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದರು.

ಬರಪೀಡಿತ ತಾಲೂಕುಗಳಿಗೆ ಪರಿಹಾರದ ಅಗತ್ಯವಿದೆ. ಆದರೆ ಅದಕ್ಕೂ ಮೊದಲು ಬರಪೀಡಿತ ತಾಲೂಕುಗಳ ಘೋಷಣೆ ಆಗಬೇಕಿದೆ. ಆದ್ದರಿಂದ ಘೋಷಣೆಗಾಗಿ ಸಿಎಂಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಈ ಹಿಂದೆ 62 ತಾಲೂಕುಗಳು ಬರಪೀಡಿತವಾಗಿತ್ತು. ಆದರೆ ಈ ಬಾರಿಯ ಮಳೆ ಕೊರತೆಯಿಂದಾಗಿ ಬರದ ಸಮಸ್ಯೆ ತೀವ್ರವಾಗಿದೆ. ಬರಪೀಡಿತ ತಾಲೂಕಗಳ ಸಂಖ್ಯೆಯೂ ಹೆಚ್ಚಾಗಿದೆ. ಮೊದಲಿಗೆ 113 ತಾಲೂಕಗಳನ್ನು ಆಯ್ಕೆ ಮಾಡಿ, ಸಮೀಕ್ಷೆಗೆ ಚಾಲನೆ ನೀಡಲಾಗಿತ್ತು. ಇದೀಗ 195 ತಾಲೂಕುಗಳು ಬರಪೀಡಿತವಾಗಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top